(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಸೋಮವಾರ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ವಾರ್ಷಿಕ ಮಕರ ಸಂಕ್ರಾಂತಿ ಆಚರಿಸಿತು.
ಆ ಪ್ರಯುಕ್ತ ಹರಿ ನಾರಾಯಣ ಹರಿ ಗೋವಿಂದ ಧ್ಯೇಯವಾಗಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲ್ಪಟ್ಟ್ಟವು. ಮುಂಜಾನೆ ಸಾಮೂಹಿಕ ಸಂಕಲ್ಪ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ, ಸಂಜೆ ಗೋಕುಲ ಭಜನಾ ಮಂಡಳಿ ಮತ್ತು ಗೋಪಾಲಕೃಷ್ಣ ಭಜನಾ ಮಂಡಳಿ ಅಂಧೇರಿ, ಶ್ರೀಕೃಷ್ಣ ಭಜನಾ ಮಂಡಳಿ ಮುಲುಂಡ್, ಹರಿಕೃಷ್ಣಭಜನಾ ಮಂಡಳಿ ನವಿಮುಂಬಯಿ, ಮಧ್ವೇಶ ಭಜನಾ ಮಂಡಳಿ ಸಾಂತಕ್ರೂಜ್, ವಿಠಲ ಭಜನಾ ಮಂಡಳಿ ವಿರಾರೋಡ್ ಪ್ರಾದೇಶಿಕ ಭಜನಾ ಮಂಡಳಿಗಳು ಭಜನೆ ಮತ್ತ್ತು ದಾಸರ ಪದಗಳು, ಹರಿ ನಾರಾಯಣ ಹರಿ ಗೋವಿಂದ ನಾಮ ಸಂಕೀರ್ತನೆ ನಡೆಸಿ ಸಂಕ್ರಾಂತಿ ಸಂಭ್ರಮಿಸಿದರು. ಎಂ.ಎಸ್ ರಾವ್ ಚಾರ್ಕೋಪ್ ಸಂಕೀರ್ತನೆ ನಡೆಸಿದರು. ಗೋಕುಲದ ಬಾಲ ಕಲಾವೃಂದವು ನೃತ್ಯಾರ್ಪಣೆಗೈದರು.
ವಿದ್ವಾನ್ ಕೃಷ್ಣರಾಜ ಉಪಾಧ್ಯಾಯ ವಿರಾರೋಡ್ ಪೂಜಾಧಿಗಳನ್ನು ನೆರವೇರಿಸಿ ಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಪುರೋಹಿತರಾದ ಶ್ರೀಷಾ ಉಡುಪ, ಶ್ರೀನಿವಾಸ ಭಟ್, ಮನೋಹರ ರಾವ್, ಪ್ರಸಾದ್ ಭಟ್ ಇತರ ಪೂಜೆಗಳನ್ನು ನೆರವೇರಿಸಿದರು. ಸುಭಾಶ್ಚಂದ್ರ ರಾವ್ ಮತ್ತು ಸುಭಾಶಿನಿ ಸುಭಾಶ್ಚಂದ್ರ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಬಂಧು ಉಷಾ ಭಟ್ ಅವರಿಗೆ ಸುವಾಸಿನಿ ಪೂಜೆ ನಡೆಸಲಾಯಿತು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ವಿಶ್ವಸ್ಥ ಹಾಗೂ ಪೂಜಾ ಸಮಿತಿ ಮುಖ್ಯಸ್ಥ ಎ.ಎಸ್ ರಾವ್, ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗುರುರಾಜ್ ಭಟ್, ಎಂ.ನರೇಂದ್ರ, ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಸೇರಿದಂತೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಇದರ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.
ಉಭಯ ಸಂಸ್ಥೆಗಳ ಪದಾಧಿಕಾರಿಗಳ ಸಾರಥ್ಯದಲ್ಲಿ ನಡೆಸಲ್ಪಟ್ಟ ವಾರ್ಷಿಕ ಮಕರ ಸಂಕ್ರಮಣ ಶುಭಾವಸರದಲ್ಲಿ ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಡಾ| ಸಹನಾ ಎ.ಪೋತಿ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್, ವಿಜಯಲಕ್ಷಿ ಸುರೇಶ್ ರಾವ್, ಶಾಂತಲಾ ಶ್ರೀನಿವಾಸ ಉಡುಪ ಜೆರಿಮೆರಿ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದು ಬಳೆ, ವೀಳೆದೆಲೆ, ತಂಬೂಲ, ಎಳ್ಳುಂಡೆ ನೀಡಿ ಹಣೆಗೆ ಹಳದಿ ಕುಂಕುಮ ಸವರಿ ಅರಸಿನ ಕುಂಕುಮ ಕಾರ್ಯಕ್ರಮ ನಡೆಸಿದರು.