ವಿಟ್ಲ: ಸಾಲೆತ್ತೂರು ನವಚೇತನ ಯುವಕ ಮಂಡಲ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಶಿವಪಂಚಾಕ್ಷರಿ ಪಾರಾಯಣ, ಅಖಂಡ ಭಜನಾ ಸಪ್ತಾಹ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜ.26ರಿಂದ ಫೆ.3ರ ವರೆಗೆ ನಡೆಯಲಿದೆ ಎಂದು ಅಧ್ಯಕ್ಷ ಸೋಮನಾಥ ಪಾಲ್ತಾಜೆ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜ.26ರಂದು ಬೆಳಗ್ಗೆ ಗಣಪತಿ ಹೋಮ, ಬೆಳಗ್ಗೆ ಸೂರ್‍ಯೋದಯದಿಂದ ಸಂಜೆ ಸೂರ್‍ಯಸ್ತದವರೆಗೆ ಸಾಮೂಹಿಕ ಶಿವಪಂಚಾಕ್ಷರಿ ಪಾರಾಯಣ ನಡೆಯಲಿದೆ.
27ರಂದು ಬೆಳಗ್ಗೆ ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಅಖಂಡ ಭಜನಾ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನಾನಾ ಸಂಘಗಳಿಂದ ಭಜನೆ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್‍ಯಕ್ರಮದಲ್ಲಿ ಸೋಮನಾಥ ಪಾಲ್ತಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮುಖಂಡ ಶ್ರೀಕೃಷ್ಣ ಭಜನೆ ಮಹತ್ವದ ಬಗ್ಗೆ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ವನಾಥ ಪೂಜಾರಿ ನರ್ಕಳ, ಶಿವರಾಮ ಶೆಟ್ಟಿ ಕೊಲ್ಲಾಡಿ, ವಿದ್ಯೇಶ್ ರೈ ಕಿಲ್ಲಂಬಲೆಪಡ್ಪು, ಶೇಖರ ಪೂಜಾರಿ ಉಳಿಯತ್ತಡ್ಕ, ಗೋಪಾಲ ಸಪಲ್ಯ ಕಲ್ಲಮಜಲು, ಗೋಪಾಲ ಮಾಸ್ತರ್ ದಾರೆಪಡ್ಪು, ಲಕ್ಷ್ಮಣ ಸಪಲ್ಯ ಸಾಲೆತ್ತೂರು, ಧನಂಜಯ ಕಟ್ಟತ್ತಿಲ, ವಿಷ್ಣುಮೂರ್ತಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಯುವಕ ಮಂಡಲದ ಹಿರಿಯ ಸದಸ್ಯ ಕೃಷ್ಣಪ್ಪ ಶೆಟ್ಟಿಗಾರ್ ಮಾವೆ ಅವರನ್ನು ಸನ್ಮಾನಿಸಲಾಗುವುದು.
ಪ್ರತಿದಿನ ಸಂಜೆ ಧಾರ್ಮಿಕ ಸಭೆ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಲಿದೆ ಎಂದರು.
ಜ. 30ರಂದು ನಡೆಯುವ ಧಾರ್ಮಿಕ ಸಮಾರೋಪ ಸಮಾರಂಭದಲ್ಲಿ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಉದ್ಯಮಿ ಮಾಧವ ಮಾವೆ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ ಮೇಗಿನಮಲಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಟಿ. ತಾರಾನಾಥ ಕೊಟ್ಟಾರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ವೆಂಕಪ್ಪ ಶೆಟ್ಟಿಗಾರ್ ಪಾಲ್ತಾಜೆ, ಪ್ರಧಾನ ಕಾರ್‍ಯದರ್ಶಿ ರಾಮಚಂದ್ರ ಬಿ. ಶೆಟ್ಟಿಗಾರ್ ಅಗರಿ, ಕೋಶಾಧಿಕಾರಿ ಶೇಖರ ಪೂಜಾರಿ ಮಾವೆ, ಗೌರವ ಸಲಹೆಗಾರ ಶಂಕರ್ ಶೆಟ್ಟಿಗಾರ್ ಮಾವೆ ಉಪಸ್ಥಿತರಿದ್ದರು.


