ಬಂಟ್ವಾಳ, ಜ. ೨೪: ೫೦ ವರ್ಷಗಳನ್ನು ಪೂರೈಸುತ್ತಿರುವ ಬಂಟ್ವಾಳದ ರೋಟರಿ ಕ್ಲಬ್‌ನ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮ ಜ. ೨೭ರಂದು ಸಂಜೆ ೬ಗಂಟೆಗೆ ಅಡ್ಯಾರಿನ “ಅಡ್ಯಾರ್ ಗಾರ್ಡನ್”ನಲ್ಲಿ ನಡೆಯಲಿದೆ ಎಂದು ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ರೋಟರಿ ಜಿಲ್ಲೆ ೩೧೮೧ರ ರಾಜ್ಯಪಾಲ ರೋಹಿನಾಥ ಪಿ. ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ ೩೧೩೧ರ ಪೂರ್ವ ಜಿಲ್ಲಾ ಗವರ್ನರ್ ಮೋಹನ್ ಹಿರಾಚಂದ್ ಪಲೇಶಾ ಉಪಸ್ಥಿತರಿರುವರು, ಅತಿಥಿಗಳಾಗಿ ವಲಯ ೩೧೮೧ರ ಚುನಾಯಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು, ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್ ಎಂ., ವಲಯ ೪ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಗವರ್ನರ್ ಅವರ ಕನಸಿನಂತೆ ಅಂಗನವಾಡಿಗಳನ್ನು ಸಬಲೀಕರಣಗೊಳಿಸುವ ಆಶಾಸ್ಪೂರ್ತಿ ಯೋಜನೆಯಡಿ ತಾಲೂಕಿನ ೫ ಅಂಗನವಾಡಿ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ. ೫೦ ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರು ಶುದ್ದೀಕರಣ ಯಂತ್ರ, ಮಿಕ್ಸರ್ ಗ್ರೈಂಡರ್, ಕುಕ್ಕರ್‌ಗಳನ್ನು ಒದಗಿಸಲಾಗಿದೆ. ಬಂಟ್ವಾಳ ತಾಲೂಕಿನ ಕೊಲ ಸರಕಾರಿ ಪ್ರೌಢಶಾಲೆಗೆ ೬ ಶೌಚಾಲಯವನ್ನು ನಿರ್ಮಿಸಿ ಕೊಡಲಾಗಿದೆ. ಮಾನೀಯ ವಿದ್ಯಾಸಂಸ್ಥೆಗೆ ೫ ತರಗತಿ ಕೊಠಡಿ, ಪೆರ್ನೆ ಹಾಹೂ ಪೊಳಲಿ ಶಾಲೆಗಳಿಗೆ ಕೊಠಡಿ ನಿರ್ಮಾಣ ಮಾಡಲು ಯೋಜನೆ ರೂಪಿಸಿಸಲಾಗಿದೆ. ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಬಂಟ್ವಾಳ ಪುರಸಭೆ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ, ಜೇಸಿಐ ಬಂಟ್ವಾಳದ ಸಹಯೋಗದೊಂದಿಗೆ ಪ್ರಯಾಣಿಕರ ತಂಗುದಾಣವನ್ನು ಪುನರ್ ನವೀಕರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸುವರ್ಣ ವರ್ಷಾಚರಣೆ ಸಮಿತಿ ಡಾ ರಮೇಶಾನಂದ ಸೋಮಾಯಜಿ, ಜಿಲ್ಲಾ ಲೆಫ್ಟಿನೆಂಟ್ ಸಂಜೀವ ಪೂಜಾರಿ, ನಿಕಟಪೂರ್ವ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ನಿರ್ದೇಶಕ ಧನಂಜಯ ಬಾಳಿಗ ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here