Wednesday, October 18, 2023

ರೋಟರಿ ಕ್ಲಬ್ ಬಂಟ್ವಾಳ ಟೌನ್: ಹೊಸ ವರ್ಷಾಚರಣೆ, ನೂತನ ಪದಾಧಿಕಾರಿಗಳ ಆಯ್ಕೆ.

Must read

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನೂತನ ವರ್ಷದ ಸಂಭ್ರಮಾಚರಣೆ ಹಾಗೂ 2018-19 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.     ಸಮಾರಂಭದಲ್ಲಿ ಆಶಾಮಣಿ ರೈ ನೇತೃತ್ವದಲ್ಲಿ ರೋಟರಿ ಕುಟುಂಬದ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಆದರ್ಶ ದಂಪತಿ ಸ್ಪರ್ಧೆಯಲ್ಲಿ ಹರಿಣಿ ಸತೀಶ್ ಪ್ರಥಮ ಸ್ಥಾನ  ಹಾಗೂ ಮನೀಷ ಜಯರಾಜ್ ದಂಪತಿಗಳು ದ್ವಿತೀಯ ಸ್ಥಾನ ಪಡೆದರು. 2018-19 ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಜಯರಾಜ್ ಎಸ್ ಬಂಗೇರ, ಕಾರ್ಯದರ್ಶಿ ಪಲ್ಲವಿ ಕಾರಂತ್, 2019-20 ನೇ ಸಾಲಿನ  ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮನಾಭ ರೈ,ಪದಾಧಿಕಾರಿಗಳಾದ ಶಂಕರ್ ಶೆಟ್ಟಿ, ಸುರೇಶ್ ಸಾಲಿಯಾನ್, ಆದಂ ಸಲಾಮ್, ವಿಧ್ಯಾ ಚಂದ್ರಹಾಸ ಶೆಟ್ಟಿ, ಸುಜಾತಾ ಪಿ ರೈ ಯವರಿಗೆ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಗೌರವ ಸಮರ್ಪಣೆ ಮಾಡಿದರು. 

More articles

Latest article