Thursday, October 19, 2023

ರೋಟರಿ ಕ್ಲಬ್ ಬಂಟ್ವಾಳ ಟೌನ್ : ಮೂನ್ ಲೈಟ್ ಡಿನ್ನರ್ ಮೀಟ್, ಸನ್ಮಾನ ಸಮಾರಂಭ. 

Must read

ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಆನ್ಸ್ ಕ್ಲಬ್ ವತಿಯಿಂದ  ಮೂನ್ ಲೈಟ್ ಡಿನ್ನರ್ ಮೀಟಿಂಗ್  ಹೊಟೇಲ್ ರಂಗೋಲಿ ಯಲ್ಲಿ  ಉಮೇಶ್ ನಿರ್ಮಲ್  ನಿರ್ಮಲ್ ಅಧ್ಯಕ್ಷತೆ ಯಲ್ಲಿ ನಡೆಯಿತು . ಕ್ಲಬ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಜಯರಾಜ್ ಎಸ್ ಬಂಗೇರ ಹಾಗೂ ವಿಂದ್ಯಾ ಎಸ್ ರೈ ಮಂಡಿಸಿದರು. ಆನ್ಸ್ ಕ್ಲಬ್  ವತಿಯಿಂದ 2018 ನೇ ಸಾಲಿನಲ್ಲಿ ಸಾಧನೆಗಾಗಿ ಬಂಟ್ವಾಳ ತಾಲ್ಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಜಯಲಕ್ಷ್ಮೀ ಭುವನೇಶ್ ಪಚ್ಚಿನಡ್ಕ, ಜೋಡುಮಾರ್ಗ ನೇತ್ರಾವತಿ ಜೇಸೀ ಅಧ್ಯಕ್ಷರಾಗಿ ವಲಯ ಪ್ರಶಸ್ತಿ ಪುರಸ್ಕೃತ ಸವಿತಾ ನಿರ್ಮಲ್, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪಲ್ಲವಿ ಕಾರಂತ್, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಾಗಿ ಮಂಜುಳಾ ಶಾಂತ್ ರಾಜ್, ವಿಂದ್ಯಾ ಎಸ್ ರೈ ಯವರಿಗೆ ಆನ್ಸ್ ಕ್ಲಬ್ ಅಧ್ಯಕ್ಷರಾದ ಆಶಾಮಣಿ ಡಿ ರೈ ಸನ್ಮಾನಿಸಿ ಗೌರವಿಸಿದರು . ನಿಕಟ ಪೂರ್ವ ಅಧ್ಯಕ್ಷ ರಾದ ಚಂದ್ರಹಾಸ ಶೆಟ್ಟಿ ಯವರು ಶುಭ ಹಾರೈಸಿದರು. ರಾಜೇಶ್ವರಿ  ಪ್ರಾರ್ಥನೆಗೈದರು . ಭವಿಷ್ ಎಂ ಶೆಟ್ಟಿ ಹಾಗೂ ವಿದ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರೋಟರಿ ಕುಟುಂಬದ ಸದಸ್ಯರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

More articles

Latest article