ವಿಟ್ಲ: ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಟ್ಲದ ವಿಜಯ ಬ್ಯಾಂಕ್ ಮುಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಉತ್ತಮ ಲಾಭ ಕೊಡುವ ವಿಜಯ ಬ್ಯಾಂಕ್ ವಿಲೀನ ಕಾರ್ಯ ಕೇಂದ್ರ ಸರಕಾರದ ಭಂಡತನದ ನಿರ್ಧಾರವಾಗಿದೆ. ಇದು ಮೂರ್ಖತನದ ಪರಮಾಧಿಕಾರಯಾಗಿದೆ. ಜಿಲ್ಲೆಯಲ್ಲಿ ಸ್ಥಾಪನೆಗೊಂಡ ಈ ಬ್ಯಾಂಕ್ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಇದೀಗ ಮುಳುಗುತ್ತಿರುವ ಬ್ಯಾಂಕ್ನೊಂದಿಗೆ ವಿಜಯ ಬ್ಯಾಂಕ್ ವಿಲೀನಗೊಳ್ಳುತ್ತಿರುವುದು ಜಿಲ್ಲೆಯ ನಾಗರೀಕರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಆಡಳಿತ ನಡೆಸುವುದೇ ಗೊತ್ತಿಲ್ಲ. ಈ ಜಿಲ್ಲೆಯ ಸಂಸದ ನಳಿನ್ ಅವರು ಲಾಭದಲ್ಲಿರುವ ಬ್ಯಾಂಕನ್ನು ಉಳಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮಾತನಾಡಿ ವಿಜಯ ಬ್ಯಾಂಕ್ ನೂರಾರು ಶಾಖೆಗಳನ್ನು ಹೊಂದಿದೆ. 2.80 ಲಕ್ಷ ಕೋಟಿ ಲಾಭಗಳಿಸುತ್ತಿದೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ದಮಯಂತಿ, ಹಸೈನಾರ್ ನೆಲ್ಲಿಗುಡ್ಡೆ, ನಾಮನಿರ್ದೇಶಿತ ಸದಸ್ಯರಾದ ಶಮೀರ್ ಪಳಿಕೆ, ಪ್ರಭಾಕರ್ ಭಟ್ ಮಾವೆ, ಭವಾನಿ ರೈ ಕೊಲ್ಯ, ಕಾಂಗ್ರೆಸ್ ಮುಖಂಡರಾದ ಮುರಳೀಧರ ಶೆಟ್ಟಿ, ವಿ.ಕೆ.ಎಂ ಅಶ್ರಫ್, ಶ್ರೀಧರ್ ಬಾಳೆಕಲ್ಲು, ಅಬ್ದುಲ್ ಕರೀಂ ಕುದ್ದುಪದವು, ಅಬ್ದುಲ್ ರಹಿಮಾನ್ ಕರುಂಬಳ, ಅಬ್ದುಲ್ ಖಾದ್ರಿ, ಶ್ರೀನಿವಾಸ ಶೆಟ್ಟಿ ಕೊಲ್ಯ, ಎಲ್ಯಣ್ಣ ಪೂಜಾರಿ, ಎಂ.ಕೆ ಮೂಸಾ, ಸುಧಾಕರ ಪೂಜಾರಿ, ಎಸ್.ಕೆ ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.