ವಿಟ್ಲ: ಪೆರುವಾಯಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಮಕ್ಕಳ ಲೋಕ ಆಶ್ರಯದಲ್ಲಿ ನಡೆದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್‍ಯಕ್ರಮದಲ್ಲಿ ಮಕ್ಕಳ ಸಾಹಿತಿ ಶ್ರೀನಿವಾಸ ಭಟ್ ಸೇರಾಜೆ ಅವರನ್ನು ಸಂಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಸಾಹಿತಿ ವಿ.ಮ.ಭಟ್ ಅಡ್ಯನಡ್ಕ, ಸವಿತಾ ಎಸ್ ಬಟ್ ಅಡ್ವಾಯಿ, ಬಂಟ್ವಾಳ ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ, ಶಾಲಾ ಸಂಚಾಲಕ ಸಚಿನ್ ಎ. ಅಡ್ವಾಯಿ ಭಾಗವಹಿಸಿದ್ದರು.
14ನೇ ಮಕ್ಕಳ ಸಾಹಿತ್ಯ ಸಮ್ಮೇಲನದ ಅಧ್ಯಕ್ಷೆ ಪೆರುವಾಯಿ ಅನುದಾನಿತ ಶಾಲೆಯ ವೀಕ್ಷಿತ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮಕ್ಕಳಲ್ಲಿರುವ ಸೃಜನಾತ್ಮಕ ಕಲೆ, ಸಾಹಿತ್ಯ ಇನ್ನಿತರ ಪ್ರತಿಭೆಗಳಿಗೆ ಸಮ್ಮೇಳನ ವೇದಿಕೆ ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಠಲ ಪ್ರೌಢಶಾಲೆಯ ನಂದಿತಾ ಕೆ. ಅಭಿನಂದನಾ ಭಾಷಣ ಮಾಡಿದರು. ಅಳಿಕೆ ಶ್ರೀಸತ್ಯಸಾಯಿ ಪ್ರೌಢಶಾಲೆಯ ಅಭಿರಾಮ ಸಮಾರೋಪ ಭಾಷಣ ಮಾಡಿದರು.
ಪಕಳಕುಂಜ ವೇಣುಗೋಪಾಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೋಕ್ಷ ಮತ್ತು ಬಳಗದವರಿಂದ ನುಡಿಗೀತೆ ಪ್ರಸ್ತುತಗೊಂಡಿತು. ವಿಟ್ಲ ಸರಕಾರಿ ಮಾದರಿ ಶಾಲೆಯ ಶ್ರಾವ್ಯ ಸ್ವಾಗತಿಸಿದರು. ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೊಹಮ್ಮದ್ ರಾಝಿಕ್ ವಂದಿಸಿದರು. ಮುಚ್ಚಿರಪದವು
ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಫಿದಾ ಕಾರ್‍ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಯಲ್ಲಿ ಆಯ್ಕೆಯಾದ ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರೋಪಕ್ಕಿಂತ ಮುಂಚೆ ಸಮ್ಮೇಳನದಲ್ಲಿ ಚಿತ್ತ ಚಿತ್ತಾರ, ಮಕ್ಕಳ ಕವಿಗೋಷ್ಠಿ ಪ್ರಸ್ತುತಗೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here