ಬಂಟ್ವಾಳ: ಜ.24ರಂದು ಸುಭಾಶ್ಚಂದ್ರ ಭೋಸ್ ರ ಜನ್ಮ ದಿನಾಚರಣೆಯ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರು ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದಲ್ಲಿ ಬಂಟ್ವಾಳದ ದೈಹಿಕ‌ ಶಿಕ್ಷಣ ಶಿಕ್ಷಕರ ಸಂಘದ ಸದಸ್ಯರು ಭಾಗವಹಿಸಿ ಪುರುಷ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಸತತ. ಹತ್ತು ವರ್ಷ ಪ್ರಥಮ‌ ಸ್ಥಾನವನ್ನು ಪಡೆದಿದೆ, ಹಾಗೂ ಮ್ಯಾಟ್ ಕಬಡ್ಡಿಯಲ್ಲಿ ಪ್ರಥಮಬಾರಿ ದ್ವಿತೀಯ ಸ್ಥಾನ ಗಳಿಸಿತು ಮತ್ತು ಜನಪದ ಸಮೂಹ ಗೀತೆಯಲ್ಲಿ ತೃತೀಯ ಸ್ಥಾನವನ್ನೂ .ಪಡೆದುಕೊಂಡಿದೆ ಮಾತ್ರವಲ್ಲದೆ ವ್ಯಯಕ್ತಿಕ ವಿಭಾಗದಲ್ಲಿ ಪರುಷ ಮತ್ತು ಮಹಿಳೆಯರು ಹಲವು ಪ್ರಶಸ್ತಿ ಗಳನ್ನು ಪಡೆದು ಬಂಟ್ವಾಳ ತಾಲೂಕಿಗೆ ಕೀರ್ತಿ ತಂದಿರುತ್ತಾರೆ..ಈ ನಿಟ್ಟಿನಲ್ಲಿ ತಾಲೂಕು ಘಟಕವು ವಿಜೇತರನ್ನು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಶಿವಪ್ರಕಾಶ್ ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಶ್ರೀಮತಿ ರತ್ನಾವತಿ ಹಾಗೂ ಬಂಟ್ವಾಳ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ ಜಾಲ್ಸೂರು ಇವರು ಅಭಿನಂದಿಸಿದರು.. ಕಾರ್ಯಕ್ರಮದಲ್ಲಿ ಜಿಲ್ಲಾ‌ಸಂಘದ ಗೌರವ ಸಲಹೆಗಾರರಾದ ಗಂಗಾಧರ ರೈ ಮಾಣಿ .ಜತ್ತಪ್ಪಗೌಡ. ಬಿಳಿಯೂರು ಸುರೇಶ್ ಶೆಟ್ಟಿ ಇವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here