ಉಜಿರೆ: ಧರ್ಮಸ್ಥಳದಲ್ಲಿ ತುಲಾಭಾರ ಸೇವೆಗೆ ಆನ್‌ಲೈನ್ ಮೂಲಕ ಮುಂಗಡಕಾದಿರಿಸುವ ಸೌಲಭ್ಯಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಪೂರಣ್‌ವರ್ಮ ಉಪಸ್ಥಿತರಿದ್ದರು.
ವೆಬ್‌ಸೈಟ್: www.shridharmasthala.org. ಭಕ್ತಾದಿಗಳು ಈ ವೆಬ್‌ಸೈಟ್ ಮೂಲಕ ತುಲಾಭಾರ ಸೇವೆಯ ದಿನಾಂಕ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್ ಮೂಲಕವೇ ಸೇವೆಯ ಹಣ ಪಾವತಿಸಬಹುದು. ಸೇವೆಯ ದಿನಾಂಕ ಕಾದಿರಿಸಿದ ಬಳಿಕ ಈ ಬಗ್ಗೆ ಖಚಿತ ಸಂದೇಶರವಾನಿಸಲಾಗುತ್ತದೆ. ಧರ್ಮಸ್ಥಳಕ್ಕೆ ಬಂದಾಗ ಸಂದೇಶದ ವಿವರ ತಿಳಿಸಿ ತುಲಾಭಾರ ಸೇವೆ ಮಾಡಬಹುದು.
ತುಲಾಭಾರ ಸೇವೆಗೆ ಆನ್‌ಲೈನ್ ಕಾದಿರಿಸುವ ಸೌಲಭ್ಯವನ್ನು ಡಿ. ಶ್ರೇಯಸ್‌ಕುಮಾರ್ ಮತ್ತು ನಿಶ್ಚಲ್‌ಕುಮಾರ್ ಡಿ. ಮಾರ್ಗದರ್ಶನದಲ್ಲಿ ಬೆಂಗಳೂರಿನ ವೈರ್‌ಕ್ಯಾಂಪ್ ಸಂಸ್ಥೆಯವರು ರೂಪಿಸಿದ್ದಾರೆ.


