Tuesday, September 26, 2023

ನೀಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಧ್ವಜಸ್ಥಂಭ ಪ್ರತಿಷ್ಠೆ, ನೇಮೋತ್ಸವಕ್ಕೆ ಚಾಲನೆ

Must read

ಬಂಟ್ವಾಳ: ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಶ್ರೀ ಕೊಡಮಣಿತ್ತಾಯ, ಕಲ್ಕುಡ-ಕಲ್ಲುರ್ಟಿ, ಬ್ರಹ್ಮಬದರ್ಕಳ ಗರಡಿ ದೈವಸ್ಥಾನಕ್ಕೆ ಸುಮಾರು 9ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನ ಕಾರ್ಯಕ್ರಮ ಸೋಮವಾರ ಜರಗಿತು.
ಪೆಜಕ್ಕಳ ಗಂಗಾಧರ ಕಕೃಣ್ಣಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ಥಂಭಕ್ಕೆ ಪೂಜೆ ಸಹಿತ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಬೆಳಗ್ಗೆ ಸಾರಿ ಹಾಕಿ ಗೊನೆ ಕಡಿಯುವುದು, ಕೊಡಮಣಿತ್ತಾಯ ದೈವಕ್ಕೆ ಪಂಚವಿಶಂತಿ, ಕಲಶ ಪೂಜೆ, ಧ್ವಜಸ್ಥಂಭಕ್ಕೆ ಪಂಚಾಮೃತ ಸಹಿತ ನವಕ ಕಲಶಾಭಿಷೇಕ, ಪಂಚಪರ್ವ ಸೇವೆ, ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಗಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಿನಾಯಕ ಪ್ರಭು, ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಧ್ವಜಸ್ಥಂಭಕ್ಕೆ ಮರ ದಾನಿ ಅಣ್ಣು ಕಂಬಳಿ ಪಚ್ಚೇರು, ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡ್ಲೊಟ್ಟು, ಕಾರ್ಯದರ್ಶಿ ಕೊರಗಪ್ಪ ಶೆಟ್ಟಿ ತಿರ್ಮಲೊಟ್ಟು, ಧ್ವಜಸ್ಥಂಭ ನಿರ್ಮಾಣ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಕಾರ್ಯದರ್ಶಿ ಮಾಧವ ಪೂಜಾರಿ ಕುಲ್ಲಾಲ್, ಮುಂಬ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ, ವಿವಿಧ ಸಮಿತಿ ಪ್ರಮುಖರಾದ ಯೋಗೀಶ್ ಪ್ರಭು, ಕೃಷ್ಣ ಶೆಟ್ಟಿ, ಉಮೇಶ್ ಕೋಟ್ಯಾನ್, ಕೃಷ್ಣ ನಾಯಕ್, ಉಷಾ ಇಂದು ಶೇಖರ್, ನಳಿನಿ, ಪದ್ಮನಾಭ ಶೆಟ್ಟಿ, ಮೋಹನದಾಸ ಗಟ್ಟಿ, ಯತೀಶ್ ಶೆಟ್ಟಿ, ಆನಂದ ಆಚಾರ್ಯ, ಸುರೇಶ್ ಶೆಟ್ಟಿ, ಭವಾನಿ ಶಂಕರ್, ವಿಶ್ವನಾಥ ಶೆಟ್ಟಿ, ಡೊಂವಯ ಶೆಟ್ಟಿ, ಹರೀಶ್ ಶೆಟ್ಟಿ, ಸುಂದರ ಶೆಟ್ಟಿ, ಗೋಪಾಲಕೃಷ್ಣ ಚೌಟ, ಆನಂದ ಶೆಟ್ಟಿ, ಮಹಾಬಲ ಶೆಟ್ಟಿ, ಸದಾಶಿವ ಪೂಜಾರಿ, ಯುವರಾಜ ಆಳ್ವ, ಆನಂದ ಕುಲ್ಲಾಲ್, ಸುಧೀರ್ ಕುಮಾರ್, ಯಶ್ವಿನ್ ಕಡ್ತಾಲಬೆಟ್ಟು ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

More articles

Latest article