Thursday, October 26, 2023

ಇರಾ: ನೀರು ಮತ್ತು ನೈರ್ಮಲ್ಯ ಜಾಥಾ, ವಿಶೇಷ ಗ್ರಾಮ ಸಭೆ

Must read

ಇರಾ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು ದ.ಕ.ಜಿಲ್ಲಾ ಪಂ.ಮಂಗಳೂರು, ತಾಲೂಕು ಪಂ.ಬಂಟ್ವಾಳ, ಇರಾ ಗ್ರಾಮ ಪಂ, ದ.ಕ.ಜಿಲ್ಲಾ.ಪಂ ಉನ್ನತೀಕರಿಸಿದ ಶಾಲೆ ತಾಳಿತ್ತಬೆಟ್ಟು ಇರಾ ಹಾಗೂ ಸಮುದಾಯ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಡಿ ನೀರು ಮತ್ತು ನೈರ್ಮಲ್ಯ ಕುರುತ ವಿಶೇಷ ಗ್ರಾಮ ಸಭೆಯು ಇಂದು ಇರಾ ಮಳಯಾಲಿ ಬಿಲ್ಲವ ಸಭಾ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ ಇರಾ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರು ಜೀವ ಸಂಕುಲದ ಅವಿಭಾಜ್ಯ ಅಂಗವಾಗಿರುವ ನೀರನ್ನು ಸದ್ಬಳಕೆ ಮಾಡುವುದರೊಂದಿಗೆ ಮುಂದಿನ ಜನಾಂಗಕ್ಕಾಗಿ ಸಂರಕ್ಷಿಸುವ ಜಾಗೃತಿ ಪ್ರತಿಯೋರ್ವರಿಂದಲೂ ನಡೆಯಬೇಕಾಗಿದೆ ಎಂದರು.


ನೀರು ಮತ್ತು ನೈರ್ಮಲ್ಯ ಸಂಪನ್ಮೂಲ ಅಧಿಕಾರಿ ತೇಜಸ್ ಮತ್ತು ಕೃಷ್ಣ ಪ್ರೋಡಕ್ಷ್ಸನ್ ಬೆಂಗಳೂರಿನ ದಿವಾಕರ ಬಾಳೆಪುಣಿ ಯವರು ನೀರು ಮತ್ತು ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ನ ಉಪಾದ್ಯಕ್ಷರಾದ ಚಂದ್ರಾವತಿ ಎ. ಕರ್ಕೇರಾ, ಗ್ರಾ.ಪಂ. ಸದಸ್ಯರಾದ ಮೋಯಿದು ಕುಂಞ, ಗೋಪಾಲ ಅಶ್ವಥ ಡಿ., ದೇವದಾಸ ಅಡಪ,ಪಾರ್ವತಿ ನಾಯಕ್ ಮತ್ತು ಪಂ.ಅಭಿವೃಧ್ದಿ ಅಧಿಕಾರಿ ನಳಿನಿ ಎ.ಕೆ.ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು. ಶಾಲಾ ಮಕ್ಕಳಿಗಾಗಿ ನೀರು ಮತ್ತು ನೈರ್ಮಲ್ಯದ ಬಗ್ಗೆ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಚತಾ ಜಾಥಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಟಿ.ಯಸ್ ಸ್ವಾಗತಿಸಿ ಶಿಕ್ಷಕರಾದ ಜಾನ್ ಫೆರ್ನಾಂಡಿಸ್ ಧನ್ಯವಾದ ಸಲ್ಲಿಸಿ ಶಂಕರ್‍ ಕಾರ್ಯಕ್ರಮ ನಿರೂಪಿಸಿದರು.

More articles

Latest article