ಮಂಗಳೂರು: ಮಂಗಳೂರಿನ ಬೆಂಗ್ರೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದದ ನಗರವಾಸ್ತವ್ಯ ಕಾರ್ಯಕ್ರಮ ಫೆ.3ರಂದು ಸಂಜೆ ಇರಲಿದ್ದು, ತಾವೆಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಆಹ್ವಾನವನ್ನು ಅಧ್ಯಕ್ಷರು ನೀಡಿದ್ದಾರೆ. ಇದರಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಮಾರು 20 ನಿಮಿಷಗಳ ಕಾರ್ಯಕ್ರಮ ಮಾದಕ ದ್ರವ್ಯದ ಕುರಿತಾಗಿ ನೀಡಬೇಕು ಎಂದು ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದ್ದು, ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ತಿಳಿಸುವುದಾಗಿ ಹೇಳಿದ್ದೇನೆ. ಸಮಗ್ರ ಬಂಟ್ವಾಳ ಮತ್ತು ವಿಟ್ಲ ಭಾಗದ ಪತ್ರಕರ್ತರು ಫೆ.3ರಂದು ಸಂಜೆ 4ರಿಂದ ರಾತ್ರಿವರೆಗೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆಯುವ ನಗರವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ.
