Wednesday, October 25, 2023

ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಗೋಪಾಲ ತ್ರಾಸಿ ಅವರ ‘ಈ ಪರಿಯ ಕಥೆಯ’ ಕೃತಿ ಬಿಡುಗಡೆ

Must read

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಕೃತಿ ರೂಪಿತ ಬರವಣಿಗೆ ಅನುಭವಗಳ ಅನಾವರಣಕ್ಕೆ ಪೂರಕವಾಗಿದೆ. ಪ್ರಕಟಿತ ಕೃತಿ ಎಂದಿಗೂ ಶಾಸ್ವತವಾಗಿದ್ದು ಎಂದಿಗೂ ವೈಜ್ಞಾನಿಕ ಶಕ್ತಿಯನ್ನು ಮೀರಿ ನಿಲ್ಲಬಲ್ಲದು. ರಚಿತ ಬರವಣಿಗೆಯನ್ನು ಪ್ರಕಟಿಸುವರೇ ಸಾಹಿತ್ಯ ದಾಸೋಹಿಗಳು ಎಂದು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ತಿಳಿಸಿದರು.

ಕಳೆದ ಆದಿತ್ಯವಾರ ಕಾರ್ಕಳದಲ್ಲಿನ ಬಾಹುಬಲಿ ಬೆಟ್ಟದಲ್ಲಿನ ಶ್ರೀ ಗೋಮಟೇಶ್ವರ ಸನ್ನಿಧಿಯಲ್ಲಿ ಮಹಾ ಕಾವ್ಯಗಳ ಮಹಾ ಕವಿ ಡಾ| ಪ್ರದೀಪ್‌ಕುಮಾರ್ ಹೆಬ್ರಿ ಸರ್ವಾಧ್ಯಕ್ಷತೆಯಲ್ಲಿ ಜರುಗಿಸಿದ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತ ನಾಟಕಕಾರ ಸದಾನಂದ ಸುವರ್ಣ ಅವರ ಹಿನ್ನುಡಿಯೊಂದಿಗೆ ಸುವರ್ಣಗಿರಿ ಪ್ರಕಾಶನ ಮಂಗಳೂರು ಪ್ರಕಾಶಿಸಿದ ಮುಂಬಯಿನ ಕಥೆಗಾರ ಗೋಪಾಲ ತ್ರಾಸಿ ಅವರ ಅಂಕಣ ಬರಹ ‘ಈ ಪರಿಯ ಕಥೆಯ’ ಕೃತಿ ಬಿಡುಗಡೆ ಗೊಳಿಸಿ ಪುನರೂರು ಮಾತನಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಾದಂಬರಿಕಾರ ಮತ್ತು ಬರಹಗಾರ ಡಾ| ನಾ.ಡಿಸೋಜ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಮಹಾ ಕಾವ್ಯಗಳ ಮಹಾ ಕವಿ ಡಾ| ಪ್ರದೀಪ್‌ಕುಮಾರ್ ಹೆಬ್ರಿ, ಐಡಬ್ಲ್ಯುಜೆಯು (ದೆಹಲಿ) ರಾಷ್ಟ್ರಾಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಹಿರಿಯ ವಕೀಲ ಎಂ.ಕೆ ವಿಜಯ ಕುಮಾರ್ ಕಾರ್ಕಳ ಉಪಸ್ಥಿತರಿದ್ದರು.

ನಾ.ಡಿಸೋಜ ಅಧ್ಯಕ್ಷೀಯ ನುಡಿಗಳನ್ನಾಡಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕೃತಿಗಳ ಮೇಲೆ ಪ್ರಭಾವ ಬೀರಿದೆ. ಆದುದರಿಂದ ಕೃತಿ ರೂಪಿತ ಸಾಹಿತ್ಯ ಯಾರಿಗೂ ಬೇಡೆವೆಣಿಸುತ್ತಿದೆ. ಆದರೆ ಸಾಹಿತ್ಯಾಸಕ್ತರು ಕೃತಿ ಪ್ರಕಾಶನಕ್ಕೆ ಹಿಂದೇಟು ಹಾಕಬಾರದು. ಕೊನೆಗೂ ಪ್ರಕಾಶಿತ ರೂಪಿತ ಕೃತಿಗಳೇ ಸಾಹಿತ್ಯದ ಮೂಲವನ್ನು ಕಾಪಾಡಬಲ್ಲದು. ಕವಿಗಳೂ ಸರಿ ಲೇಖಕರೂ ಸರಿ ತಮ್ಮ ಕೃತಿಗಳನ್ನು ಸಾಧ್ಯವಾದಷ್ಟು ಪ್ರಕಟಿಸಿ ಸಾಹಿತ್ಯದ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕು ಎಂದ ಕರೆಯಿತ್ತರು.

ಈ ಸಂದರ್ಭದಲಿ ಪ್ರತಿಷ್ಟಿತ ಕವಿಗಳಾದ ರಾಧಾಕೃಷ್ಣ ಉಳಿಯತಡ್ಕ, ಸಾ.ದಯಾ, ಅಶೋಕ್ ವಳದೂರು, ಬೊಮ್ಮರಬೆಟ್ಟು ಎ.ನರಸಿಂಹ, ನಗಸೇವಕಿ ವಿನಾಕ್ಷಿ ಜಿ.ಪಣಿಯೂರು, ಸೌಮ್ಯಶ್ರೀ ಎಸ್.ಅಜೆಕಾರು, ಅನಿಲ್ ಸಸಿಹಿತ್ಲು (ಮುಂಬಯಿ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕೃತಿಕಾರರಿಗೆ ಅಭಿನಂದಿಸಿದರು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಪತ್ರಕರ್ತ ಶೇಖರ ಅಜೆಕಾರು ಸ್ವಾಗತಿಸಿ ಕೃತಿಯನ್ನು ಪರಿಚಯಿಸಿದರು. ಪ್ರೊ| ಶ್ರೀನಿವಾಸ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಲೇಖಕ ಗಂಗಾಧರ್ ಪಣಿಯೂರು (ಕಾರ್ಕಳ) ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ವಿಜಯಕುಮಾರ್ ಜೈನ್ ಧನ್ಯವದಿಸಿದರು.

More articles

Latest article