ಬಂಟ್ವಾಳ: ಎನ್. ಜಿ. ನಯನ್ ಚಾರಿಟೇಬಲ್ ಟ್ರಸ್ಟ್ (ರಿ) ನಯನಾಡು ಇವರ ಆಶ್ರಯದಲ್ಲಿ ಭಾರತೀಯ ಕಥೋಲಿಕ್ ಯುವ ಸಂಚಾಲನ, ನಯನಾಡು ಘಟಕ ಹಾಗೂ ಶ್ರೀ ರಾಮ ಯುವಕ ಸಂಘ ನಯನಾಡು ಇವರ ಸಹಕಾರದೊಂದಿಗೆ ಮಂಗಳೂರಿನ ಕೆ. ಎಂ. ಸಿ. ಆಸ್ಪತ್ರೆ ಯ ನುರಿತ ವೈದ್ಯರ ತಂಡದಿಂದ ಹಾಗೂ ಸಮುದಾಯ ದಂತ ಆರೋಗ್ಯ ವಿಭಾಗದ ವೈದ್ಯರ ತಂಡ ದಿಂದ ನಯನಾಡಿನ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ದಂತ ಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ ದ ಯಶಸ್ಸಿ ಆರೋಗ್ಯ ದ ಕಾರ್ಯಕ್ರಮ ನಡೆಯಿತು. ನಯನಾಡಿನ ಸಂತ ಅಸ್ಸಿಸಿ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾದರ್ ಸಂತೋಷ್ ಮಿನೆಜಸ್ ರವರ ಅಧ್ಯಕ್ಷತೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದ ಉದ್ಘಾಟನಾ ಸಮಾರಂಭ ನಡೆಯಿತು.

ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ. ಹ್ಯೂಮೇನಿಟಿ ಫೌಂಡೇಶನ್ ನ ಸಂಸ್ಥಾಪಕ ರೋಶನ್ ಡಿಸೋಜ ಬೆಳ್ಮಣ್ ರವರ ಸಮಾಜ ಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡುತ್ತಾ ಶ್ರೀ ರಾಮ ಯುವಕ ಸಂಘ ಹಾಗೂ ಕಥೋಲಿಕ್ ಯುವ ಸಂಚಾಲನ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಸಮಾಜದ ಸಾಮರಸ್ಯ ದ ಆರೋಗ್ಯ ವನ್ನು ಚೆನ್ನಾಗಿ ರೂಪಿಸಿಕೊಟ್ಟಿದೆಯೆಂದರು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 40ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೆ. ಎಂ. ಸಿ ಯ ವೈದ್ಯಾಧಿಕಾರಿಗಳ ತಂಡ ಭಾಗವಹಿಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದರು. ಈ ಆರೋಗ್ಯ ಶಿಬಿರ ದಲ್ಲಿ 221 ಮಂದಿ ತಮ್ಮ ಆರೋಗ್ಯದ ಕುರಿತಾದ ತಪಾಸಣೆ ಯನ್ನು ಮಾಡಿಸಿಕೊಂಡರು. ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 53 ಮಂದಿಗೆ ಉಚಿತವಾಗಿ ಕನ್ನಡಕದ ವ್ಯವಸ್ಥೆ ಯನ್ನು ಮಾಡಿಕೊಡಲಾಯಿತು. ರಕ್ತದಾನ ಶಿಬಿರ ದಲ್ಲಿ 38 ಮಂದಿ ಭಾಗವಹಿಸಿದ್ದರು. ಪಿಲಾತಬೆಟ್ಟು ನಯನಾಡು ಕಾಜಲ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮೋಂತೀ ಸಿಸ್ಟರ್. ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಚಂದ್ರಶೇಖರ್ ಶೆಟ್ಟಿ ಕುಮಂಗಿಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರಾದ ಸೈಮನ್ ಮೋರಾಸ್ ಯನ್. ಜಿ. ಟ್ರಸ್ಟ್ ನ ಸಂಸ್ಥಾಪಕ ರಾದ ಪಿಂಟೋ ಬೇಕರಿ ಮಾಲಕರಾದ ಶ್ರೀಯುತ ನೆಲ್ವಿಸ್ಟರ್ ಪಿಂಟೋ. ಭಾರತೀಯ ಕಥೋಲಿಕ್ ಯುವ ಸಂಚಾಲನ ನಯನಾಡು ಘಟಕದ ಅಧ್ಯಕ್ಷ ಅಲೆನ್ ಡಿಸೋಜ. ಶ್ರೀ ರಾಮ ಯುವಕ ಸಂಘದ ಅಧ್ಯಕ್ಷ ದಯಾನಂದ್ ನಿನ್ನಿಕಲ್ಲು. ಗ್ರಾಮ ಪಂಚಾಯಿತಿ ಪ್ರತಿನಿಧಿ ಹಾಗೂ ಯುವಕ ಸಂಘದ ಗೌರವಾಧ್ಯಕ್ಷ ರಾದ ಲಕ್ಷ್ಮೀ ನಾರಾಯಣ ಹೆಗ್ಡೆ ನಿನ್ನಿಕಲ್ಲು. ನಯನಾಡು ಘಟಕದ ಯನ್. ಜಿ. ಟ್ರಸ್ಟ್ ನ ಸಂಸ್ಥಾಪಕ & ಉಪಾಧ್ಯಕ್ಷರಾದ ನವೀನ್ ಅರುಣ್ ಗಲ್ಬಾಂವೋ ಹಾಗೂ ಕೆ. ಎಂ. ಸಿಯ ನೇತ್ರ ತಜ್ಞ ಡಾ ಕೀರ್ತನ್ ರಾವ್ ರವರು ಭಾಗವಹಿಸಿದ್ದರು. ಐ. ಸಿ. ವೈ. ಯಂ ನ ಡೈರೆಕ್ಟರ್ ರೆ. ಫಾ. ರೊನಾಲ್ಡ್ ಪ್ರಕಾಶ್ ಡಿಸೋಜ ರವರು, ಅಧ್ಯಕ್ಷ ಜೈಸನ್ ಪಿರೇರಾ ಹಾಗೂ ಕಾರ್ಯದರ್ಶಿ ಫೆವಿಷಾ ಮೊಂತೇರೊರವರು ಇವತ್ತಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಶುಭವನ್ನು ಹಾರೈಸಿದರು.
ಯನ್ ಜಿ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಹತ್ತಿರದ ನೇರಳಕಟ್ಟೆ ಎಂಬಲ್ಲಿ ರಸ್ತೆ ಅಪಘಾತಕ್ಕಿಡಾಗಿ ಮೃತಪಟ್ಟ ಮುಸ್ಲಿಂ ಬಂದುವೊಬ್ಬರ ಮನೆಯವರಿಗೆ ಧನ ಸಹಾಯವನ್ನು ಮಾಡಲಾಯಿತು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸೈಮನ್ ಮೋರಸ್ ರವರು ಸ್ವಾಗತಿಸಿದರು. ಯುವಕ ಸಂಘದ ಸದಸ್ಯ ಹರೀಶ್ ಶೆಟ್ಟಿ ನಯನಾಡು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here