Wednesday, September 27, 2023

ಮಾ.5 ರಂದು ಬಂಟ್ವಾಳದಿಂದ ಪೊಳಲಿಗೆ ಹೊರೆಕಾಣಿಕೆ

Must read

ಬಂಟ್ವಾಳ: ಮಾರ್ಚ್ 4 ರಿಂದ ಮಾರ್ಚ್ 13 ರ ವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಬಂಟ್ವಾಳ ತಾಲೂಕಿನಿಂದ ಕ್ಷೇತ್ರಕ್ಕೆ ಹೊರಕಾಣಿಕೆ ಸಮರ್ಪಣೆ ಉದ್ದೇಶದಿಂದ ಪೂರ್ವಭಾವಿ ಸಭೆ ಅದಿತ್ಯವಾರ ಸಂಜೆ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.


ಈ ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯಕ್ ಭಾಗವಹಿಸಿ ಮಾತನಾಡಿ ಪೊಳಲಿ ದೇವಸ್ಥಾನ ಕ್ಕೆ ಬ್ರಹ್ಮ ಕಲಶೋತ್ಸವ ಅಂಗವಾಗಿ ಬಂಟ್ವಾಳ ತಾಲೂಕಿನಿಂದ ಸಮರ್ಪಣೆಯನ್ನು ಮಾ. 5 ರಂದು ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ತಾಲೂಕಿನ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಹೊರೆಕಾಣಿಕೆ ನೀಡುವಂತೆ ವಿನಂತಿ ಮಾಡಿದರು.
ಜೊತೆಗೆ ತಾಲೂಕಿನಿಂದ ಅಕ್ಕಿ ಮತ್ತು ಸಕ್ಕರೆ ನೀಡುವ ಬಗ್ಗೆ ಅಲೋಚನೆ ಮಾಡಲಾಗಿದೆ , ಇದರ ಜೊತೆಗೆ ಭಕ್ತರ ಇತರ ವಸ್ತುಗಳನ್ನು ಸಮರ್ಪಣೆ ಮಾಡಬಹುದು.
ಆದರೆ ಅಕ್ಕಿಯನ್ನು ನೀಡುವ ಭಕ್ತರು ಒಂದೇ ಗುಣಮಟ್ಟದ ಉತ್ತಮ ಅಕ್ಕಿಯನ್ನು ನೀಎಉವಂತೆಯೂ‌ಸಭೆಯಲ್ಲಿ ತಿಳಿಸಲಾಯಿತು.
ಮಾ. 5 ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಮೀಪದಿಂದ ಅದ್ದೂರಿ ಮೆರವಣಿಗೆ ಯ ಮೂಲಕ ಕ್ಷೇತ್ರ ಕ್ಕೆ ಹೊರಡಲಾಗುವುದು . ಈ ಮೆರವಣಿಗೆ ಯಲ್ಲಿ ಎಲ್ಲಾ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರು.
ಹೋಟೆಲ್ ರಂಗೋಲಿ ಮಾಲಕ ಚಂದ್ರಹಾಸ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಏರ್ಯಲಕ್ಮೀನಾರಾಯಣ ಆಳ್ವ, ದೇವದಾಶ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಗೋವಿಂದ ಪ್ರಭು ಚಂದ್ರಪ್ರಕಾಶ್ ಶೆಟ್ಟಿ, ಸುಲೋಚನ ಜಿಕೆ ಭಟ್, ಮಚ್ಚೇಂದ್ರನಾಥ ಸಾಲಿಯಾನ್, ಸೇಸಪ್ಪ ಕೋಟ್ಯಾನ್  ಮತ್ತಿತರು ಉಪಸ್ಥಿತರಿದ್ದರು.

More articles

Latest article