Monday, April 8, 2024

ಮರಳು ಸಮಸ್ಯೆ ಅಂತ್ಯ : ಮನೆ ಕಟ್ಟುವವರ ಮೊಗದಲ್ಲಿ ಸಂತಸ

ಬಂಟ್ವಾಳ: ಮರಳು ಸಮಸ್ಯೆಯ ಬಗ್ಗೆ ಬೆಂಗಳೂರಿನಲ್ಲಿ ಇಂದು ವಿಶೇಷ ಸಭೆ ನಡೆದು ಪರಿಹಾರಕ್ಕೆ ಕ್ರಮಗೈಗೊಳ್ಳಲು ತೀರ್ಮಾನ ತೆಗೆದುಕೊಳ್ಳಲಾಯಿತು.
ಕರಾವಳಿಯ ದಕ್ಷಿಣ ಕನ್ನಡ , ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಳುಗಾರಿಕೆಗೆ ಇದ್ದಂತಹ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಮರಳಿನ ಸಮಸ್ಯೆಯ ವಿಚಾರದಲ್ಲಿ ಚರ್ಚಿಸಲು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹಾಗೂ ಗಣಿ ಸಚಿವ ರಾಜಶೇಖರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಸಭೆ ನಡೆಯಿತು. ‌
ಕರಾವಳಿ ಭಾಗದ ಜನರಿಗೆ ನಿವೇಶನ ಕ್ಕಾಗಿ ಕಳೆದ ಕೆಲವು ದಿನಗಳಿಂದ ತೀರ ಮರಳು ಸಮಸ್ಯೆ ಉದ್ಬವವಾಗಿದ್ದು ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಶಾಸಕ ರ ಮತ್ತು ಅಧಿಕಾರಿಗಳ ಜೊತೆ ಕೆಲ ಕಾಲ ಚರ್ಚೆ ನಡೆದ ಬಳಿಕ ಮುಂದಿನ ಹತ್ತು ದಿನದೊಳಗೆ ಜನರಿಗೆ ಸುಲಭ‌ ಹಾಗೂ ಕನಿಷ್ಟ ಬೆಲೆಯಲ್ಲಿ ಮರಳು ನೀಡುವಂತೆ ತೀರ್ಮಾನಕ್ಕೆ ಬರಲಾಯಿತು.
ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಬೇರೆ ಯಾವುದೇ ರೀತಿಯ ಕ್ರಮಗಳ ಮೂಲಕ ಜನರಿಗೆ ಮರಳು ನೀಡುವಂತೆ ಸಭೆಯಲ್ಲಿ ತಿಳಿಸಿದ್ದು ಇನ್ನು ಮುಂದೆ ಮರಳು ಸಮಸ್ಯೆ ಬರಬಾರದು ಎಂದು ಹೇಳಿದ್ದಾರೆ.
ಈ ಸಭೆಯಲ್ಲಿ ಸಚಿವೆ ಜಯಮಾಲ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್ ಕುಮಾರ್, ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಸ್ ಅಂಗಾರ ಮತ್ತಿತರರು ಉಪಸ್ಥಿತರಿದ್ದರು.

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...