ವಿಟ್ಲ: ದಾರುಲ್ ಅಶ್‌ಅರಿಯ್ಯಾ ಸುರಿಬೈಲು ವಿದ್ಯಾ ಸಂಸ್ಥೆಯಲ್ಲಿ ಮರ್‌ಹೂಂ ಶೈಖುನಾ ಸುರಿಬೈಲು ಉಸ್ತಾದ್ 17ನೇ ಆಂಡ್ ನೇರ್ಚೆ ಹಾಗೂ ಮರ್‌ಹೂಂ ಪಿ.ಎ ಉಸ್ತಾದ್ ಅನುಸ್ಮರಣಾ ಕಾರ್‍ಯಕ್ರಮ ಜ. 3ಮತ್ತು 4ರಂದು ನಡೆಯಲಿದೆ.
ಜನವರಿ ೩ ರಂದು ಸಂಜೆ ೫ ಕ್ಕೆ ಬೊಳ್ಮಾರು ಅಬೂಬಕರ್ ಮುಸ್ಲಿಯಾರ್ ಮಖ್‌ಬರ ಝಿಯಾರತ್‌ಗೆ ನೇತೃತ್ವ ನೀಡಲಿದ್ದಾರೆ. ಸಂಜೆ 5.30 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಸುಲೈಮಾನ್ ಹಾಜಿ ನಾರ್ಶ ಧ್ವಜಾರೋಹಣ ನೆರವೇರಿಸಲಿದ್ದಾರೆ. 6.30 ಕ್ಕೆ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ನಡೆಯಲಿದೆ. ಈ ಕಾರ್‍ಯಕ್ರಮದಲ್ಲಿ ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್, ಶೈಖುನಾ ವಾಲೆಮುಂಡೋವು ಉಸ್ತಾದ್ ಭಾಗವಹಿಸಲಿದ್ದಾರೆ.
ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಬುರ್ಧಾ ಮಜ್ಲಿಸ್ ನಡೆಯಲಿದೆ. ರಾತ್ರಿ 9.30 ವಾಗ್ಮಿ ಮೌಲಾನ ಲತೀಫ್ ಸಅದಿ ಪಯಶ್ಶಿ ಮುಖ್ಯಪ್ರಭಾಷಣ ನಡೆಸಲಿದ್ದಾರೆ.
ಜ.4 ರಂದು 3 ಗಂಟೆಗೆ ಖತ್ಮುಲ್ ಖುರ್’ಆನ್ ನಡೆಯಲಿದ್ದು ಈ ಕಾರ್‍ಯಕ್ರಮದಲ್ಲಿ ಸಯ್ಯಿದ್ ಇಬ್ರಾಹಿಂ ಪೂಕುಂಞಿ ತಂಙಳ್ ಉದ್ಯಾವರ, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಬೃಹತ್ ಸಂದಲ್ ಮೆರವಣಿಗೆ ನಡೆಯಲಿದೆ. ಸಂಜೆ 5 ಗಂಟೆಗೆ ನಡೆಯುವ ಸೌಹಾರ್ದ ಸಂಗಮ ಕಾರ್‍ಯಕ್ರಮದಲ್ಲಿ ರಾಜ್ಯ ವಕ್ಫ್ ಸಚಿವ ಝಮೀರ್ ಅಹಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬಿ.ರಮಾನಾಥ ರೈ, ಎನ್.ಎ.ಹ್ಯಾರಿಸ್ ಬೆಂಗಳೂರು, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಖ್, ಎನ್.ಕೆ.ಎಂ.ಶಾಫಿ ಸಅದಿ ಬೆಂಗಳೂರು, ಎಂ.ಎಸ್.ಮುಹಮ್ಮದ್, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಮುಹಮ್ಮದಾಲಿ ಸಖಾಫಿ ಅಶ್ ಅರಿಯ್ಯಾ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭ ಹಾಗೂ ಶೈಖುನಾ ಪಿ.ಎ.ಉಸ್ತಾದ್ ಅನುಸ್ಮರಣಾ ಕಾರ್‍ಯಕ್ರಮಕ್ಕೆ ಸಯ್ಯಿದ್ ಬಾಯಾರ್ ತಂಙಳ್ ನೇತೃತ್ವ ನೀಡಲಿದ್ದು ಪ್ರಖ್ಯಾತ ವಿದ್ವಾಂಸ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಯ್ಯಿದ್ ಆದೂರು ತಂಙಳ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ತಲಕ್ಕಿ, ಶೈಖುನಾ ಬೇಕಲ್ ಉಸ್ತಾದ್, ಶೈಖುನಾ ಮಾಣಿ ಉಸ್ತಾದ್, ಶೈಖುನಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಪಿ.ಕೆ.ಅಬೂಬಕರ್ ಉಸ್ತಾದ್ ಟಿಪ್ಪುನಗರ, ವಾಲೆಮುಂಡೋವು ಉಸ್ತಾದ್, ಮಂಚಿ ಉಸ್ತಾದ್, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಹಿತ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಆಂಡ್ ನೇರ್ಚೆ ಸ್ವಾಗತ ಸಮಿತಿ ಉಪಾಧ್ಯಕ್ಷ ಹಾಜಿ ಕೆ.ಎ.ಹಮೀದ್ ಕೊಡಂಗಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here