Thursday, October 26, 2023

ಶಬರಿಮಲೆಯ ಆಚಾರ ವಿಚಾರ ಧಿಕ್ಕರಿಸುವುದು ಉತ್ತಮ ಬೆಳವಣಿಗೆಯಲ್ಲ

Must read

ಮಾಣಿಲ: ಶಬರಿಮಲೆ ಪುಣ್ಯ ಕ್ಷೇತ್ರದ ಆಚಾರ ವಿಚಾರಗಳು ವ್ಯವಸ್ಥಿತವಾಗಿ ನಡೆಯತಕ್ಕ ಕಾಲಘಟ್ಟದಲ್ಲಿ ಅದನ್ನು ಧಿಕ್ಕರಿಸುವ ಕಾರ್‍ಯ ಉತ್ತಮ ಬೆಳವಣಿಗೆಯಲ್ಲ. 48 ದಿನಗಳ ಬ್ರಹ್ಮಚರ್‍ಯವನ್ನು ಪಾಲಿಸಬೇಕಾಗಿರುವುದು ಸಂಪ್ರದಾಯ. ಆದರೆ ಪರಿವರ್ತನೆಯ ಪರಿಸ್ಥಿತಿಗಳು ರಕ್ತಪಾತ, ಅಶಾಂತಿ, ದುರವಸ್ಥೆಗೆ ಕಾರಣವಾಗುವಂತೆ ಮಾಡುತ್ತಿದೆ. ಪುಣ್ಯ ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕಾದ ಅನಿವಾರ್ಯತೆ ಹಿಂದೂ ಸಮಾಜಕ್ಕೆ ಇದೆ. ಕ್ಷೇತ್ರಗಳ ನಿಯಮಗಳನ್ನು ತಪ್ಪಿಸುವುದರ ಪರಿಣಾಮ ದೇಶ ದುರಂತಗಳನ್ನು ಎದುರಿಸಬೇಕಾಗುತ್ತದೆ. ಸಮಾಜ ಜಾಗೃತವಾಗಿ ದುಸ್ಥಿತಿ ಸಂಭವಿಸದಂತೆ ಜಾಗರೂಕರಾಗಬೇಕು. ವ್ರತ ನಿಷ್ಠೆಯಲ್ಲಿ ಕಟ್ಟು ನಿಟ್ಟಿನ ಬದ್ಧತೆಯನ್ನು ಕಾಪಾಡಬೇಕು. ಸಮಾಜದಲ್ಲಿ ಅನರ್ಥಗಳು ಘಟಿಸದಂತೆ ಭಕ್ತರು ಮಾನಸಿಕವಾಗಿ ಸುದೃಢವಾಗಿರಬೇಕು. ದುರ್ಘಟನೆ ಮರುಕಳಿಸದಂತೆ ಭಕ್ತ ವೃಂದ ಎಚ್ಚರ ವಹಿಸಬೇಕು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article