ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಉಜ್ವಲ ಅನಿಲ ಸಂಪರ್ಕ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ ದ.ಕ. ಜಿಲ್ಲೆಯ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್‌ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಮಿತಿಯ ಮುಖ್ಯಸ್ಥ, ಸಂಸದ ಪ್ರಹ್ಲಾದ್ ಜೋಷಿ  ಬಂಟ್ವಾಳದಲ್ಲಿ ಪ್ರಧಾ‌ನಮಂತ್ರಿ ಉಜ್ವಲ ಯೋಜನೆ ಉದ್ಘಾಟಿಸಿ  ಮಾತನಾಡಿದ ಅವರು  1974ರಲ್ಲಿ ಗ್ಯಾಸ್ ಸಂಪರ್ಕಕ್ಕೆ ನನ್ನ ತಂದೆ ಅರ್ಜಿ ಹಾಕಿದ್ದರು.
ಆದ್ರೆ ನಮ್ಮ ಮನೆಗೆ ಗ್ಯಾಸ್ ಬಂದಿದ್ದು 1989ರಲ್ಲಿ ಕಾಂಗ್ರೆಸ್ ನವರು ಪಂಪ್ ಹೊಡೆದಿದ್ದು ಬಿಟ್ಟರೆ ಗ್ಯಾಸ್ ಸಿಗಲಿಲ್ಲ. ಅಚ್ಚೇ ದಿನ್ ಅನ್ನೋದು ಕಾಂಗ್ರೆಸ್ ಗೆ ಬರಲ್ಲ,
ಅದು ನಮ್ಮ ದೇಶದ ಜನರಿಗೆ ಬರಬೇಕು ಅನ್ನೋದು ಮೋದಿ ಆಶಯ. ಕಾಂಗ್ರೆಸ್ ಅವಧಿಯಲ್ಲಿ ದೇಶದ ಜನರಿಗೆ ಗ್ಯಾಸ್ ಕೊಡಲು ಆಗಲಿಲ್ಲ, ಸರಿಯಾದ ರಸ್ತೆ ಆಗಲಿಲ್ಲ
ವಾಜಪೇಯಿ ಕಾಲದಲ್ಲಿ ಈ ದೇಶದ ರಸ್ತೆಗಳು ಅಭಿವೃದ್ಧಿಯಾದವು. ಮೊಗಲರು, ಬ್ರಿಟಿಷರಿಗಿಂತ ಅತೀ ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸ್ಸಿಗರು ಜಗತ್ತಿನಲ್ಲಿ ಭಾರತ ತಲೆಎತ್ತಿ ನಿಂತಿರೋದೇ ಅಚ್ಚೇ ದಿನ್   ರಾಹುಲ್ ಗಾಂಧಿಗೆ ಯಾರೋ ಭಾಷಣ ಬರೆದು ಕೊಡ್ತಾರೆ, ಅವ್ರು ಓದ್ತಾರೆ , ಅದರ ಪುಟಗಳು ಚೆಲ್ಲಾಪಿಲ್ಲಿಯಾದ್ರೆ ರಾಹುಲ್ ಗಾಂಧಿಗೆ ಫಜೀತಿಯಾಗುತ್ತೆ  ಗಾಂಧಿ ಕಂಪೆನಿಯವರ ಸಮಸ್ಯೆ ಏನಂದ್ರೆ ಅವರ ಡಿಎನ್ ಎ ಪ್ರಾಬ್ಲಂ ಇದೆ. ಇವರು ಅಸಲಿ ಗಾಂಧಿ ಅಲ್ಲ, ನಕಲಿ ಗಾಂಧಿಗಳು
ವಿದೇಶಿ ನೆಲದಲ್ಲಿ ಇವಿಎಂ ಬಗ್ಗೆ ಆರೋಪ ಮಾಡೋ ದುಷ್ಟ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ. ನಿನ್ನೆ ಮೊನ್ನೆಯಿಂದ ಪ್ರಿಯಾಂಕ ಗಾಂಧಿ ಅಂತ ಹೇಳ್ತಿದಾರೆ
ಈಕೆಯ ಗಂಡ 50 ಲಕ್ಷದಲ್ಲಿದ್ದವ ಈಗ 3 ಲಕ್ಷ ಕೋಟಿಯಲ್ಲಿದ್ದಾನೆ
ಪ್ರಿಯಾಂಕ ಗಂಡ ರಾಬರ್ಟ್ ವಾದ್ರಾ ಹರಿಯಾಣದ ಸರ್ಕಾರಿ ಭೂಮಿಯನ್ನು ಒಂದು ಲೂಟಿ ಹೊಡೆದಿದ್ದಾನೆ
ಜಗತ್ತಿನ ಅತೀ ದೊಡ್ಡ ಲೂಟಿಕೋರ ಪ್ರಿಯಾಂಕ ಗಂಡ ರಾಬರ್ಟ್ ವಾದ್ರಾ ಎಂದು ಅವರು ವಾಗ್ದಾಳಿ ನಡೆಸಿದರು.

 

ಬಳಿಕ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ  ಫಲಾನುಭವಿಗಳಿಗೆ ಎಲ್ಪಿಜಿ ಸಂಪರ್ಕವನ್ನ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ‌ಯನ್ನ ನೀಡಿದ್ರು. ಇದೇ ವೇಳೆ ಮಾತನಾಡಿದ ಅವ್ರು, ಕೇಂದ್ರ ಸರ್ಕಾರದ ಉಜ್ವಲ ಅನಿಲ‌ ಸಂಪರ್ಕ ಯೋಜನೆ ಪ್ರಧಾನಿ‌ ನರೇಂದ್ರ ಮೋದಿಯವರ ಒಂದು ಕನಸಾಗಿತ್ತು..ಹೀಗಾಗಿ ಅಡುಗೆ ಮನೆಗಳನ್ನ ಹೊಗೆ ಮತ್ತು ಮಾಲಿನ್ಯ ಮುಕ್ತಗೊಳಿಸುವ ಯೋಚನೆಯಿಂದ ದೇಶಾದ್ಯಂತ ಈ ಯೋಜನೆಯನ್ನ ಪ್ರಾರಂಭಿಸಿದ್ದೇವೆ. ಮುಂದಿನ‌ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ಜನರಿಗೆ ತಲುಪಿಸುವ ಕಾರ್ಯ ಆಗತ್ತೆ ಅಂತ ಹೇಳಿದ್ರು..
 ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸದ, ಪೆಟ್ರೋಲಿಯಂ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ,  ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಂಗಾರ,  ಸಂಜೀವ ಮಠಂದೂರು, ಸಿ‌.ಟಿ.ರವಿ, ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೂಡು, ತೈಲ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾವಿಸಿದರು.
ಭಾರತ್ ಪೆಟ್ರೋಲಿಯಂನ ತಂಗವೇಲು ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ತೈಲ ಸಂಸ್ಥೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಉಜ್ವಲ ಯೋಜನೆಯ ಫಲಾನುಭವಿಗಳು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here