ಕಾರ್ಕಳ: ಕಟೀಲು ಮೇಳದ ಪುಂಡು ವೇಷಧಾರಿ ಲೋಕೇಶ್ ಮುಚ್ಚೂರ್ ಅವರಿಗೆ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾಾನ ಜಾತ್ರೆೆಯ ಸಂದರ್ಭ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೇರು ಭಾಗವತ ಬಲಿಪ ನಾರಾಯಣ ಭಾಗವತರು ಪ್ರಶಸ್ತಿ ಪ್ರದಾನ ಮಾಡಿ, ಆಶೀರ್ವದಿಸಿದರು.
ಅಧ್ಯಕ್ಷತೆ ವಹಿಸಿದ್ದ ಒಂದೇ ದೇಶ- ಒಂದೇ ಶಿಕ್ಷಣ ರಾಷ್ಟ್ರೀಯ ಅಭಿಯಾನದ ರೂವಾರಿ ಪ್ರಕಾಶ್ ಅಂಚನ್ ದಡ್ಡಲಕಾಡು ಮಾತನಾಡಿ, ಸರಕಾರಿ ಶಾಲೆ ಉಳಿಸಿದರೆ ನಮ್ಮೂರಿನ ಸಂಸ್ಕೃತಿ, ಕಲೆ, ಪರಂಪರೆ ಬೆಳಗುತ್ತದೆ ಎಂದರು. ಪ್ರತಿ ಊರಿನವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತೆ ವಿನಂತಿಸಿದರು.
ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಯಕ್ಷಗಾನ, ಸಾಧಕರಿಗೆ ಸನ್ಮಾಾನ ಇತ್ಯಾಾದಿ ಕಾರ್ಯಗಳ ಮೂಲಕ ಧರ್ಮ ಕ್ಷೇತ್ರಗಳು ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವುದು ಅಪೇಕ್ಷಣೀಯ ಎಂದರು.
ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ಅಭಿನಂದನಾ ಭಾಷಣ ಮಾಡಿ, ಕಡು ಬಡತನದಲ್ಲಿ ಹುಟ್ಟಿ, ಗಾಡ್ ಫಾದರ್ ಗಳಿಲ್ಲದೆ ಸ್ವಯಂ ಪರಿಶ್ರಮದಿಂದ ಧಿಗಿಣ ವೀರನೆಂದೇ ಖ್ಯಾಾತರಾದ ಮಚ್ಚೂರು, ರಾತ್ರಿ ಇಡೀ ಯಕ್ಷ ರಂಗದಲ್ಲಿ ಮೆರೆದು, ಮರುದಿನ ಹೋಟೆಲ್ ನಲ್ಲಿ ಕನಿಷ್ಠ 8 ಗಂಟೆ ದುಡಿಯುವ ಕಾಯಕ ಯೋಗಿ ಎಂದರು. ಬಡ, ಹಿಂದುಳಿದ ವರ್ಗದ ಮುಚ್ಚೂರು, ಬದುಕಿನಲ್ಲಿ ಮೇಲೆದ್ದು ಬಂದು ಯಕ್ಷಲೋಕದಲ್ಲಿ ಮಿಂಚುತ್ತಿರುವ ರೀತಿಯೇ ಎಲ್ಲರಿಗೂ ಮಾದರಿ ಎಂದರು.







ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೆರ ಮಾತನಾಡಿದರು. ಜಿಪಂ ಸದಸ್ಯ ಉದಯ ಎಸ್. ಕೋಟ್ಯಾನ್, ಶ್ರೀ ಕ್ಷೇತ್ರದ ಪ್ರತಿನಿಧಿ ಗಂಗಾ ರಾಘವೇಂದ್ರ ಭಟ್, ಪ್ರಧಾನ ಅರ್ಚಕ ಕೃಷ್ಣರಾಜೇಂದ್ರ ಭಟ್, ವೇ ಮೂ. ರವೀಂದ್ರ ಭಟ್, ಸಚ್ಚಿದಾನಂದ ಎಡಮಲೆ, ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್ ಇದ್ದರು.
ಇದೇ ಸಂದರ್ಭ ಹಿರಿಯ ಅರ್ಥಧಾರಿ ನಡಿಬೆಟ್ಟು ಧರ್ಮರಾಜ ಕಟ್ಟಡರಿಗೆ ಗೌರವ ಸನ್ಮಾಾನ ಮಾಡಲಾಯಿತು. ನವೀನ್ ಟಿ. ಆರ್., ಸುರೇಶ್ ಶಿರಂತಡ್ಕ ನಿರೂಪಿಸಿದರು.
ಯಕ್ಷ ವೈಭವ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ
ಕರಾವಳಿಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ, ವೀರ ಅಭಿಮನ್ಯು ಪ್ರದರ್ಶನ ಜನ ಮೆಚ್ಚುಗೆ ಗಳಿಸಿತು.
ಎಲ್ಲೂರು ರಾಮಚಂದ್ರ ಭಟ್ ಸಂಯೋಜನೆಯಲ್ಲಿ ಕದ್ರಿ ಬಾಲ ಯಕ್ಷಕೂಟದಿಂದ ನಡೆದ “ಶ್ರೀಕೃಷ್ಣಲೀಲೆ” ಯಕ್ಷಗಾನ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.
ಲಕುಮಿ ತಂಡ ಕಲಾವಿದರಿಂದ ಅರವಿಂದ ಬೋಳಾರ್ ಪ್ರಧಾನ ಪಾತ್ರದಲ್ಲಿ ಹಾಸ್ಯ ಮಯ ತುಳು ನಾಟಕ “ಮಂಗೆ ಮಲ್ಪೊಡ್ಚಿ” ಪ್ರದರ್ಶನಗೊಂಡಿತು.