ವಿಟ್ಲ: ಕುಂಡಡ್ಕ ಪಿಲಿಪ್ಪೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಾಗೂ ಶಿಬರಿಕಲ್ಲು ಮಾಡ ಶ್ರೀ ಮಲರಾಯ ಹಾಗೂ ಮೂವರು ದೈವಂಗಳ ದೈವಸ್ಥಾನದಲ್ಲಿ ಫೆ. 5 ರಿಂದ 23 ರ ತನಕ ನಡೆಯುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಫೆ.10 ರಂದು ವಿಶೇಷವಾಗಿ ನಡೆಯುವ ರಾಜ ದರ್ಬಾರ್ ಕಾರ್‍ಯಕ್ರಮದ ಬಗ್ಗೆ ಶನಿವಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ವರ ನೂಜಿ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಯಿತು.
ಅರಸೊತ್ತಿಗೆಯ ಕಾಲಘಟ್ಟದಲ್ಲಿ ಮಾತ್ರ ಅರಮನೆಯಲ್ಲಿ ನಡೆಯುತ್ತಿದ್ದ ರಾಜ ದರ್ಬಾರ್ ಇತಿಹಾಸವಾಗಿದ್ದು, ಅದರ ವೈಭವವನ್ನು, ಸ್ವರೂಪವನ್ನು ನೆನಪಿಸುವ ಸಲುವಾಗಿ ಈ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅರಸರು ನಡೆಸುತ್ತಿದ್ದ ದರ್ಬಾರನ್ನು ಈ ಕಾಲದ ಜನರಿಗೆ ತೋರಿಸುವ ಪ್ರಯತ್ನವಾಗಿ ಈ ಕಾರ್‍ಯಕ್ರಮ ನಡೆಸಲಾಗುತ್ತಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿಗಳಿಗೆ ಸೀಮೆಯ ಪ್ರತಿಯೊಬ್ಬ ಭಕ್ತರು ಸಹಕರಿಸಬೇಕೆಂದು ತಿಳಿಸಿದರು. ದರ್ಬಾರಿನ ಪರಿಕಲ್ಪನೆಯ ರೂಪುರೇಷೆಗಳನ್ನು ವಿವರಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸೀಮೆಯ ಧಾರ್‍ಮಿಕ ಶ್ರದ್ಧಾಳು, ಹಿರಿಯರಲ್ಲಿ, ಗುತ್ತಿನ ಮನೆಯವರ ಅಭಿಪ್ರಾಯಗಳನ್ನು ಕೇಳಲಾಯಿತು.
ಸಭೆಯಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಬಲ್ಲಾಳ್ ಕೆ, ಜಯರಾಮ ಬಲ್ಲಾಳ್, ಶ್ರೀಕಂಠವರ್ಮ, ಸೀಮೆ ಗುರಿಕ್ಕಾರ ನೆಡ್ಲೆ ಈಶ್ವರ ಭಟ್, ವಿಷ್ಣು ಭಟ್ ಅಡ್ಯೇಯಿ ಪಾದೆಕಲ್ಲು, ಶ್ರೀನಿವಾಸ ರೈ ಕುಂಡಕೋಳಿ, ಮುಳಿಯಗುತ್ತು ಸಂಕಪ್ಪ ಶೇಖ, ಪಡಾರಗುತ್ತು ಭುಜಂಗ ರೈ, ಬಾಲಕೃಷ್ಣ ರೈ ಬೆಂಗ್ರೋಡಿ, ಸದಾಶಿವ ಆಚಾರ್‍ಯಕೆ., ಡಾ. ಗೀತಪ್ರಕಾಶ್ ವಿಟ್ಲ, ಸುಬ್ರಹ್ಮಣ್ಯ ಭಟ್ ದೇರಾಜೆ, ಶೇಖರ್ ಭಟ್ ಪಡಾರು, ಪ್ರಭಾಕರ ಶೆಟ್ಟಿ ದಂಬೆಕಾನ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಗತ್ಸಾಂತಪಾ ಅಳಿಕೆ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಗೋವಿಂದ ರಾಜ್ ಪೆರುವಾಜೆ, ಸಂಘಟನಾ ಕಾರ್‍ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಸಹ ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಪ್ರಚಾರ ಸಮಿತಿಯ ಉಮೇಶ್ ಮಿತ್ತಡ್ಕ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here