ವಿಟ್ಲ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಹಾಗೂ ಮಹೀಳಾ ವೇದಿಕೆ ಕುಡ್ತಮುಗೇರು ವಲಯ ಇದರ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಾದ ಲತಾ, ಲೀಲಾವತಿ. ಮತ್ತು ದಿವಾಕರ ಪೂಜಾರಿ ಅವರಿಗೆ ತಲಾ 10,000ದಂತೆ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ನರ್ಕಳ ಬ್ರಹ್ಮಶ್ರೀ ನಾರಾಯಣಗುರು ಗುರುಗಳ ಸಂದೇಶ ನೀಡಿದರು. ಸಹಾಯ ಧನ ನೀಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗೌರವಾಧ್ಯಕ್ಷರಾದ ಮುಂಡಪ್ಪ ಪೂಜಾರಿ, ಕಾರ್‍ಯದರ್ಶಿ ಮನೀಷ್ ಪೂಜಾರಿ, ಲವೀನ್ ಪೂಜಾರಿ ಉಪಸ್ಥಿತರಿದ್ದರು. ಸುಜೀತ್ ಪೂಜಾರಿ ಕಾರ್‍ಯಕ್ರಮ ನಿರೂಪಿಸಿದರು. ಸುನೀತ ಕುಡ್ತಮುಗೇರು ವಂದಿಸಿದರು.
