ಬಂಟ್ವಾಳ: ಎಸ್.ಡಿ.ಎಂ.ಸಿ. ಹಾಗೂ ಪರ್ಲಿಯಾ ಎಜುಕೇಶನಲ್ ಟ್ರಸ್ಟ್ ಕೊಡಂಗೆ ಇವರ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಕೊಡಂಗೆಯಲ್ಲಿ ಮುಖ್ಯೋಪಾದ್ಯಾಯರಾದ ಸೋನಿತಾ ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಹಾಗೂ ದ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಂ.ಇಸ್ಮಾಯಿಲ್ ನೆರವೇರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಬಿ. ಅಬ್ದುಲ್ ಸಲಾಂ ಮಾಸ್ಟರ್ ಹಾಗೂ ಶಾಂಭವಿ ರಾವ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ 1975ನೇ ಇಸವಿಯಲ್ಲಿ ಶಾಲೆ ನಿರ್ಮಿಸಲು ರುವಾರಿಗಳಾದ ದಿವಂಗತ ಅಬ್ದುಲ್ಲ ಹಾಜಿ, ದಿವಂಗತ ಎನ್.ಎ. ಖಾದರ್, ದಿವಂಗತ ಹಮ್ಮಬ್ಬ ಮಾಸ್ಟರ್, ದಿವಂಗತ ಶಿವರಾಮ ಶೆಟ್ಟಿ ಹಾಗೂ ಡಾ. ಮಹಮ್ಮದ್ ಅವರನ್ನು ಸ್ಮರಿಸಲಾಯಿತು.
ಮುಖ್ಯ ಅಥಿತಿಗಳಾಗಿ ಬಿ.ಎ. ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಕೆ.ಪಿ.ಸೂಫಿ, ಪರ್ಲಿಯಾ ಎಜುಕೇಶನಲ್ ಟ್ರಸ್ಟ್ ಸಂಚಾಲಕ ಸತ್ತಾರ್ ಪರ್ಲಿಯಾ, ಬಂಟ್ವಾಳ ಪುರಸಭೆ ಸದಸ್ಯರಾದ ಮೊಹಮ್ಮದ್ ನಂದರಬೆಟ್ಟು, ಲುಕ್ಮಾನ್, ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ಪಿ.ಎ., ರಹೀಂ, ಪರ್ಲಿಯಾ ಎಜುಕೇಶನಲ್ ಟ್ರಸ್ಟ್ ಗೌರವಾಧ್ಯಕ್ಷ ಹಂಝ ಪರ್ಲಿಯಾ, ಅಧ್ಯಕ್ಷ ಝಾಕಿರ್ ಹುಸೈನ್, ಪರ್ಲಿಯಾ ಖಿದ್ಮತುಲ್ ಇಸ್ಲಾಂ ಕಮೀಟಿ ಅಧ್ಯಕ್ಷ ಅಹಮದ್ ಬಾವ ಕಡ್ಪಿಕರಿಯ, ಮುಹಿಯುದ್ದೀನ್ ಜುಮಾ ಮಸೀದಿ ಮಿತ್ತಬೈಲು ಉಪಾಧ್ಯಕ್ಷ ಇಬ್ರಾಹಿಂ ಬೋಗೋಡಿ, ಉದ್ಯಮಿ ಮೊಹಮ್ಮದ್ ಸಾಗರ್, ಪರ್ಲಿಯಾ ನರ್ಸಿಂಗ್ ಹೋಂ ಮಾಲಕ ಇಮ್ರಾನ್ ಪರ್ಲಿಯಾ, ಇಕ್ಬಾಲ್ ಎ.ಕೆ., ಸಲಾಂ, ಇಬ್ರಾಹಿಂ ಕೊಡಂಗೆ, ರಿಯಾಝ್ ಜವಾನ್, ಸತ್ತಾರ್ ನಂದರಬೆಟ್ಟು, ಬಶೀರ್ ಪರ್ಲಿಯಾ, ಹನೀಫ್ ತೌಫೀಕ್, ಹನೀಫ್ ಅಜ್ಮಾಲ್, ಅಯ್ಯೂಬ್ ನಂದರಬೆಟ್ಟು, ಇಬ್ರಾಹಿಂ, ಶರೀಫ್ ಪೊನ್ನೋಡಿ, ಫಾರೂಖ್ ಕೋಡಿಮಜಲು, ಜುನೈದ್ ಮಂಡಾಡಿ, ಹೈದರ್ ಕಾಂಟ್ರಾಕ್ಟರ್, ಖಾದರ್ ತಾಳಿಪಡ್ಪು, ಇಕ್ಬಾಲ್, ಲತೀಫ್ ಪರ್ಲಿಯಾ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಅಶ್ರಫ್ ಕಲ್ಲಡ್ಕ ನಿರೂಪಣೆ ಮಾಡಿ ವಂದಿಸಿದರು.