ಕಂಡಕ್ಟರ್
ವಿಸೀಲು ಊದಿದ
ಡ್ರೈವರ್
ಗೇರ್ ಚೆಂಜ್ ಮಾಡಿದ
ಬಸ್ ಮುಂದೆ ಸಾಗಿತು…



ಇದೇ ಸೀಟ್ ಬೇಕೆಂದು
ಬುಕ್ ಮಾಡಿ ಇಟ್ಟ ಸೀಟ್
ಬುಕ್ ಲೇಟ್ ಆಗಿ ಅಜ್ಜೆಸ್ಟ್
ಮಾಡ್ಕೊಂಡ ಸೀಟ್
ಖಾಲಿ ಸೀಟ್ ಇದ್ಯಾ ಕೇಳಿ
ಕೂತ ಸೀಟ್
ಕಂಫರ್ಟಬಲ್ ಸೀಟ್
ಅನ್ ಕಂಪರ್ಟಬಲ್ ಸೀಟ್
ಹೀಗೆ ಹಲವು ಸೀಟ್ ಗಳಿವೆ..
ಪ್ರೇಮಿಯ ನೋಡುವ ತವಕದಲ್ಲಿ
ಪ್ರೀತಿ ಮಾಡಿ ಓಡಿಹೋಗುವ
ಅಲೋಚನೆಯಲ್ಲಿ
ಕೈ ಕೈ ಹಿಡಿದು ಮೆಲ್ಲನೆ ಮುತ್ತ ನೀಡಿ
ಕಿಸಕ್ಕನೆ ನಕ್ಕು ತೇಲಾಡಿ ಪ್ರೀತಿಯಲ್ಲಿ
ಡೈವೊರ್ಸ್ ಕೊಟ್ಟು ಗಂಡನ ನೆನೆದು ಕಣ್ಣೀರಿಟ್ಟು
ಮಗಳ ಜೊತೆಯಲ್ಲಿ
ಬಸ್ ಹತ್ತಿದ್ದು…
ಕಾಲ್ ಕಳೆದವನು
ಜ್ವರದಿಂದ ನಿನ್ನೆಯಷ್ಟೆ ಎದ್ದವನು
ಮಗನಿಗೆ ಪಿಂಡ ಬಿಟ್ಟು ಬಂದವನು
ಮದುವೆ ಊಟ ಉಂಡು ನಿದ್ದೆಗೆ ಜಾರಿದವನು
ಮಗು ಹುಟ್ಟಿದ ಖುಷಿಯಲಿ ಬಸ್ ಹತ್ತಿದವನು
ಸುಖ ದುಃಖ ಎಲ್ಲಾ ಮಿಕ್ಸ್ ಬಸ್ಸಿನೊಳಗೆ…
ಬೇರೆ ಬೇರೆ ನಿಲ್ದಾಣ
ಬೇರೆ ಬೇರೆ ಜೀವನ
ದಾರಿ ಒಂದೇ
ಕೊನೆಯ ಪಯಣಕ್ಕೆ..!?
✍ಯತೀಶ್ ಕಾಮಾಜೆ