


ಎಲ್ಲಾ ಪಾಪ ಪುಣ್ಯಗಳಿಗೆ
ಈ ಹಸಿವೇ ಕಾರಣ
ಬೇಕು ಬೇಕೆನ್ನುವ
ಹಸಿವಿನ ಮನ
ಎಲ್ಲವನ್ನೂ ಮಾಡಿಸಿದ್ದು…!
ಮುಖಕ್ಕೆ ಬಣ್ಣ ಬಳಿದು
ಬೆತ್ತಲೆ ಕ್ಯಾಟ್ ವಾಕ್ ಮಾಡಿ
ಮಾಡೆಲ್ ಆದದ್ದು
ಸೆರಗ ಜಾರಲು ಬಿಟ್ಟು
ಶೃಂಗಾರಗೊಂಡು
ರೆಡ್ ಲೈಟ್ ಏರಿಯದಲ್ಲಿ
ಸೂಳೆ ಆದದ್ದು
ಹಸಿವಿನಿಂದ…!
ಅವರಿವರನ್ನು ಕಾಡಿ ಬೇಡಿ
ಹೊಟ್ಟೆ ತುಂಬಿಸುವ ಬಿಕ್ಷುಕನಾದದ್ದು
ಅವರಿವರ ತಲೆ ಹಿಡಿದು
ಮಹಡಿ ಮೇಲೆ ಮಹಡಿ ಕಟ್ಟಿದ್ದು
ಹಸಿವಿನಿಂದ
ಇದ್ದದನ್ನು ಕೊಟ್ಟು ಇದ್ದುದ್ದರಲ್ಲಿ
ಖುಷಿ ಪಟ್ಟು
ದೇವರಾದದ್ದು
ಇದ್ದದ್ದನ್ನು ಎಳೆದು ತಿಂದು
ಗದರಿಸಿ
ರಾಕ್ಷಸನಾದದ್ದು
ಹಸಿವಿನಿಂದ..!
ಹೆಣ್ಣೆಂದರೆ ತಾಯಿ
ಪರ ಸ್ತ್ರೀ
ತಾಯಿ ಅಕ್ಕಂದಿರಿಗೆ ಸಮ ಎಂದದ್ದು
ಹೆಣ್ಣೆಂದರೆ ಭೋಗ ವಸ್ತುವೆಂದು
ಕಿತ್ತು ತಿಂದದ್ದು
ಹಸಿವಿನಿಂದ
ಹಸಿವೆಂದರೆ
ಹೊಟ್ಟೆಗೆ ಸಂಬಂಧಿಸಿದ್ದು
ಮಾತ್ರ ಅಲ್ಲ…!?
✍ಯತೀಶ್ ಕಾಮಾಜೆ


