Wednesday, October 18, 2023

ಮಾಡರ್ನ್ ಕವನ-ಹೊಸ ವರುಷ

Must read

ಕ್ಯಾಲೆಂಡರ್ ಬದಲಾಯಿಸಿದಾಗ
ಎರಡು ಮನೆಯಲ್ಲಾದ
ಘಟನೆ…?

ಒಂದು ಮನೆಯಲ್ಲಿ
ಅದೇ ಹಳೆ ಮೊಳೆಗೆ
ಜೋತು ಬಿದ್ದ ಕ್ಯಾಲೆಂಡರ್
ತೆಗೆದಾಗ
ಅದರಲ್ಲಿ ಸೂಜಿ ಕಂಡಿತು
ಆಗಲೇ ನೆನಪಾದದ್ದು..!
ಗಂಡನ ಅಂಗಿಯ ಬಟನ್ ಮತ್ತೆ
ಅಂಟಿಸಬೇಕಾದದ್ದು..
ಬೆನ್ನು ಹರಿದ ಮಗನ ಅಂಗಿಯ
ಜೋಡಿಸಬೇಕಾದದ್ದು..
ಮೈ ಕೈ ತುಂಬಿದ ಮಗಳ ಬಟ್ಟೆಯ
ಸ್ಟಿಚ್ ಬಿಡಿಸಬೇಕಾದದ್ದು..
ಜೊತೆಗೆ
ಶೆಟ್ಟರಂಗಡಿಯ ಸಾಲ ಹೊಸವರುಷಕ್ಕೆ
ತೀರಿಸುತ್ತೇನೆ ಅಂದದ್ದು..
ಮದುವೆ ಅನಿವರ್ಸರಿ ಮತ್ತೆ ಬಂದದ್ದು
ಎಲ್ಲವೂ ಮುಗಿಯಲಾರದ ಕಥೆಗಳು..!
ಹೊಸ ಕ್ಯಾಲೆಂಡರ್ ಗೆ
ಹಳೇ ಸೂಜಿ ಚುಚ್ಚಿಸಿ ನೇತು ಹಾಕಿದಳು..!

ಇನ್ನೊಂದು ಮನೆಯಲ್ಲಿ
ಈ ವರ್ಷ ಕ್ಯಾಲೆಂಡರ್ ಜಾಗವೇ
ಬದಲಾಯಿಸುವ ಬಯಕೆ
ಗಂಡನಿಕೆ ಸರ್ಪ್ರೈಸ್ ಗಿಪ್ಟ್ ಕೊಡುವ ಯೋಚನೆ
ಮಗನಿಗೆ ಕೇಳುತ್ತಿದ್ದ ಬೈಕ್ ನೀಡುವ ಯೋಜನೆ..
ಮಗಳಿಗೆ ಮಾಲ್ ನಲ್ಲಿ
ಹೊಸ ಡಿಸೈನ್
ಹೊಕ್ಕಳು ಕಾಣುವ
ಡ್ರೆಸ್ ಕೊಡಿಸುವ ಚಿಂತನೆ..
ಮನೆಯಲ್ಲೇ ಗುಂಡು ಪಾರ್ಟಿಯೋ
ರೆಸ್ಟೋರೆಂಟ್ ನಲ್ಲಿ ಆಚರಣೆಯೋ
ಅದೇ ಕನ್ಫ್ಯೂಸ್..
ಹೊಸ ಕ್ಯಾಲೆಂಡರ್ ಹೊಸ ಜಾಗಕ್ಕೆ
ನೇತು ಹಾಕಿದಳು..

ಆಚರಿಸಿ ನಿಮ್ಮ ಯೋಗ್ಯತೆಗೆ
ತಕ್ಕಂತೆ
ಏಕೆಂದರೆ ಇದು
ಕ್ಯಾಲೆಂಡರ್ ನ ಹೊಸ ವರ್ಷ..!

✍ಯತೀಶ್ ಕಾಮಾಜೆ

More articles

Latest article