ಗಡ ಗಡ ನಡುಗುವ ಚಳಿಯಲಿ
ಬಿಗಿದಪ್ಪಿದವಳು ನೀನೇ ಚೆಲುವೆ
ಪ್ರಶ್ನೆ ಹುಟ್ಟಿದ್ದೆ ಆವಾಗ.

ಕಲ್ಲು ಬಂಡೆಯ ತುತ್ತ ತುದಿಯಲಿ
ನಿಂತು ನಿನ್ನ ಹೆಸರ ಕೂಗಿದ್ದೆ
ಬೆಟ್ಟ ಗುಡ್ಡವೇ ನಕ್ಕಿತ್ತು ನೋಡು
ಪ್ರಶ್ನೆ ಹುಟ್ಟಿದ್ದೆ ಆವಾಗ
ಅಡ್ಡ ಮರದಲಿ ಕೆತ್ತಿ ಬಿಟ್ಟೆ
ನಿನ್ನ ನನ್ನ ಹೆಸರ ಚೆಲುವೆ
ಮರವೇ ಬಿದ್ದು ಬಿಟ್ಟಿತು ನೋಡು
ಪ್ರಶ್ನೆ ಹುಟ್ಟಿದೆ ಆವಾಗ
ಗುಡಿಯ ಗಂಟೆ ಬಾರಿಸಿ ಮುಗಿದೆ
ನೀನೆ ಎದೆಯ ರಾಣಿ ಆಗಲಿ ಎಂದಾಗ
ಕದವ ಮುಚ್ಚಿ ಬಿಟ್ಟ ಪೂಜಾರಿ
ಪ್ರಶ್ನೆ ಹುಟ್ಟಿದ್ದೆ ಅವಾಗ
ಪ್ರೀತಿ ಎಂದರೇನು ಗೆಳತಿ
ಬಿಗಿದಪ್ಪಿದರೆ ಪ್ರೀತಿಯೇ ಹೇಳು
ಜಗತ್ತೇ ಕೇಳುವ ಹಾಗೆ ಕೂಗಿದರೆ
ಇರುವುದೇ ಪ್ರೀತಿಯ ಬಾಳು
ಎದೆಯಲಿ ಹಚ್ಚೆ ಹಾಕಿದರೆ
ಮೂಡುವುದೇ ಪ್ರೀತಿಯ ಸಾಲು
ಗುಡಿಯಲಿ ಹರಕೆ ಹೊತ್ತರೆ
ಉಳಿಯುವುದೇ ಪ್ರೀತಿಯ ಅಮಲು
ಪ್ರಶ್ನೆಗಳು ಹುಟ್ಟಿವೆ ಇವಾಗ..
✍ಯತೀಶ್ ಕಾಮಾಜೆ