ಕತ್ತಲಲ್ಲಿ
ಬೆಳಕು ಹೊತ್ತ
ಮಿಂಚುಹುಳಕ್ಕೆ
ಇತ್ತೊಂದಿಷ್ಟು ಜಂಬ



ದಾರಿ ಹುಡುಕಿ
ಕುಂಡೆಯಲ್ಲೇ ಲೈಟ್ ಉರಿಸಿ
ಸಾಗುತ್ತಿದ್ದವು ಗುಂಪು ಗುಂಪಾಗಿ
ಆ ಮಿಂಚು ಹುಳುಗಳು
ಕತ್ತಲೆಯಲ್ಲಿ ಬೆಳಕಿನ ಹಂಗು
ನಮಗಿಲ್ಲೆಂಬ ಜಂಬದಿ
ಕಾಡೆಲ್ಲ ನಾಡಾದಾಗ
ಊರೆಲ್ಲ ದೀಪ ಬಂದಾಗ
ತನ್ನ ಬೆಳಕು ಏನು ಇಲ್ಲ ಅರಿವಾದದ್ದು
ರಾತ್ರಿಗೂ ಮಧ್ಯಾಹ್ನಕ್ಕೂ
ವ್ಯತ್ಯಾಸ ಇಲ್ಲದ ಕಾಲಬಂದಾಗ
ಮಿಂಚು ಹುಳದ ಜಂಬವೆಲ್ಲ ಕರಗಿತು..
ಬೀದಿ ದೀಪದ ಸುತ್ತ
ಸುತ್ತಿ ಸುತ್ತಿ
ಕಣ್ಣು ಕತ್ತಲೆ ಹೋಗಿ
ಬಿದ್ದು ಜೀವ ಕಳೆದು ಕೊಂಡಿತು
ದೀಪ ಉರಿಸಿ
ಶ್ರೇಷ್ಠನಾರು..
ಎದುರಾಳಿಯ ಗೆಲ್ಲುವ ತನಕ
ಮಾತ್ರ ಪಟ್ಟ..!
✍ಯತೀಶ್ ಕಾಮಾಜೆ