– 1 –
ನೀ ಮನಸ ಬಿಚ್ಚಿ
ನಕ್ಕೋಂತ ಮಾತಾಡೂವಾಗೆಲ್ಲ
ನನ್ನೆದಿಯಾಗ ಒಳಗೊಳಗss
ಕಿಲ ಕಿಲ!
ಗಂಟ ಮಾರಿ ಹಾಕ್ಕೊಂಡ್
ಬಿಕ್ಕೊಂಡ್ ಕುಂತಾಗೆಲ್ಲ
ಗಂಡಸಾದರೂ ನನ್ನ ಜೀವ
ವಿಲ ವಿಲ!

– 2 –

ಹ್ಯಾಂಗಾssರ ಮಾಡಿ
ನಿನ್ ಮೆತ್ತನ
ಎದಿಯಾಗ ಬೇರು
ಬಿಡಬೇಕಂತೀನಿ!
ನೀ ಪ್ರೀತೀ ಮಳಿ
ಸುರಸೂದಷ್ಟs ತಡಾ
ಮೊಳಕಿ ಆಗಿ
ಚಿಗೀಬೇಕಂತೀನಿ!

– 3 –

ಹಾಂಗ್ ನೋಡಿ
ಹೀಂಗ್ ಮಾಡಿ
ನನಗ ಹ್ಯಾಂಗ್ಯಾಂಗೋ
ಆಗೂವಂಗ ಮಾಡಬ್ಯಾಡ!
ನನ್ನೆದಿಯಾಗ
ಬೆಂಕಿ ಹಚ್ಚಿ
ನೀ ಹೀಂಗ್
ಮೈ ಕಾಯಿಸಿಗೋಬ್ಯಾಡ!

– 4 –
ನಿನ್ ಎದೀ
ಮುಗಲಾಗ ನನ್
ಪ್ರೀತೀ ಪಾರಿವಾಳ
ಹಾರಿಸಬೇಕಂತಿದ್ದೆ ಪ್ಯಾರಿs!
ನಿಮ್ಮಪ್ಪನ ಬಿರುಗಾಳಿ
ಬಡತಕ್ಕ ನನ್ನಾಸೆ
ಮೋಡೆಲ್ಲ ಕಿತಗೊಂಡು
ಹೋದವಲ್ಲೇ ಹಾರಿ!

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301
🌠9448591167

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here