ಒಲೆ ವ್ಯಗ್ರವಾಗಿತ್ತು, ಗ್ಯಾಸ್ ಖಾಲಿಯಾಗಿತ್ತು!
ನಾಬ್ ತುಕ್ಕು ಹಿಡಿದಿತ್ತು,
ಪೈಪ್ ಲೀಕಾಗಿತ್ತು!
ಸ್ಟಾಂಡ್ ಹಾಳಾಗಿತ್ತು,
ಫ್ಲೇಮ್ ಕೋಪಗೊಂಡಿತ್ತು!



ಅಮ್ಮನ ಕೈಯ ಹಿತವಾದ ಸ್ಪರ್ಶವಿರಲಿಲ್ಲ!
ಪ್ರೀತಿಯ ಗಾನ, ಸಂಗೀತವೂ ಇರಲಿಲ್ಲ!
ಸ್ವಚ್ಛ ಹೃದಯದ ತ್ಯಾಗ ಭಾವನೆಗಳಿರಲಿಲ್ಲ,
ಇತರರಿಗಾಗಿ ಹರಿಸಿದ ಕಣ್ಣೀರ ಹನಿಗಳಿರಲಿಲ್ಲ!
ಯಾರದೋ ಗಡಸು ಕೈಗಳು,
ಬೇಯಿಸಿ, ತಿಂದು ಹೋಗುವುವು,
ಮತ್ತೆ ಹಸಿವಾದಾಗ ವಕ್ಕರಿಸುವವು,
ಅಡಿಗೆ ಮನೆಗೇ ಮನಸಿರಲಿಲ್ಲ,
ಅವರನ್ನು ಸೇರಿಸಲು!
ಅಮ್ಮನ ಪ್ರೀತಿಗೆ ಜೀವಿಗಳು ಮಾತ್ರವಲ್ಲ,
ಪ್ರತಿ ವಸ್ತುಗಳೂ ತಲೆ ಬಾಗುವವು..
ಅಡಿಗೆ ಕೋಣೆಯ “ಬೆಂಕಿಯ ಒಲೆ” ಕೂಡಾ!!!
@ಪ್ರೇಮ್@