ಪ್ರಧಾನಮಂತ್ರಿ ಉಜ್ವಲ ಯೋಜನೆಯ ಬೃಹತ್ ಸಮಾವೇಶ ಜನವರಿ 25ರಂದು ಬೆಳಿಗ್ಗೆ 10-00ಗಂಟೆಗೆ ಬಿ.ಸಿ ರೋಡಿನಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ರ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳ ಉಚಿತ ಅಡುಗೆ ಅನಿಲ ವಿತರಿಸಲಿದ್ದು ಈ ಕಾರ್ಯಕ್ರಮಕ್ಕೆ ಬಿ.ಸಿ ರೋಡ್ ನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿಯ ಮೈದಾನದಲ್ಲಿ ಭಾರಿ ಸಿದ್ದತೆ ನಡೆಯುತ್ತಿದ್ದು ಸಮಾವೇಶದ ಸ್ಥಳಕ್ಕೆ ಬೃಹತ್ ಪೆಂಡಾಲ್ ಅಳವಡಿಸಲಾಗುತ್ತಿದ್ದು ಕಾರ್ಯಕ್ರಮದ ತಯಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ,ಸಂಸದರಾದ ನಳಿನ್ ಕುಮಾರ್ ಕಟೀಲು ಪರಿಶೀಲಿಸಿದರು.
