Friday, October 20, 2023

ಅಕ್ರಮ‌ ಕಸಾಯಿಕಾನೆಗೆ ಪುಂಜಾಲಕಟ್ಟೆ ಪೋಲೀಸರಿಂದ ದಾಳಿ ನಾಲ್ವರ ಬಂಧನ

Must read

ಬಂಟ್ವಾಳ: ಅಕ್ರಮ ಕಸಾಯಿಕಾನೆಗೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್. ಐ.ಸೌಮ್ಯ ಆರೋಪಿ ಗಳ ಸಹಿತ ಸಾವಿರಾರು ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಡಗಕಜೆಕಾರು ನಿವಾಸಿಗಳಾದ ಇಸಾಕ್, ಅಸ್ಬಾಲ್, ಮೊಹಮ್ಮದ್ ಶಾಕೀರ್ , ಮಹಮ್ಮದ್ ಶರೀಫ್ ಬಂಧಿತ ಆರೋಪಿಗಳಾದರೆ ಉಳಿದಂತೆ ಓರ್ವ ಆರೋಪಿ ಪರಾರಿಯಾಗಿದ್ದಾನೆ.


ಬಂಧಿತರಿಂದ ಎರಡು ಬೈಕ್ ಸಹಿತ 61 ಸಾವಿರದ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಕೆದಿಲ ಎಂಬ ಲ್ಲಿ ಆರೋಪಿ ಉಮ್ಮರಬ್ಬನ ಮನೆಯ ಹಿಂದುಗಡೆ ಶೆಡ್ಡಿನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರು ಗಳನ್ನು ಕಡಿದು ಮಾಂಸ ಮಾಡಿ ಮಾರಟ ಮಾಡಲು ತಯಾರು ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ್ದಾರೆ.


ಸ್ಥಳದಲ್ಲಿ ಅಂದಾಜು 50 ಕೆ.ಜಿ ಜಾನುವಾರು ಮಾಂಸ, ಕ್ರತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಾಟ ಕ್ಕೆ ಬಳಸಿದ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ದ ಕರ್ನಾಟಕ ಗೋವಧೆ ಪ್ರತಿ ಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

More articles

Latest article