ಬಂಟ್ವಾಳ: ಜ.18ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ಉದ್ಯೋಗ ಭರವಸೆ ಕೋಶ ಹಾಗೂ WORKFORCE DEVELOPMENT CENTRE, BANGALORE ಇವರ ಜಂಟಿ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೌಶಲ್ಯಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ಸಂದೇಶ್ ಶೆಟ್ಟಿ, ಕಾರ್ಯಾಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಇಂತಹ ತರಬೇತಿ ಕಾರ್ಯಾಗಾರಗಳಲ್ಲಿ ತರಬೇತು ಪಡೆದ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳು ಪ್ರತಿಷ್ಠಿತ ದೇಶೀಯ ಹಾಗೂ ವಿದೇಶೀಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಇಂದಿನ ತರಬೇತಿಯು ನಿಮಗೆ ಉಜ್ವಲ ಭವಿಷ್ಯ ಹಾಗೂ ಉನ್ನತ ಉದ್ಯೋಗಕ್ಕೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.
ಈ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ WORKFORCE DEVELOPMENT CENTRE ಇದರ ನಿರ್ದೇಶಕರಾದ  ಗುರುರಾಜ್ ಎಂ.ಕೆ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವ್ಯಕ್ತಿಯ ಜೀವನದಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗ ಸಮಾನ ಮಹತ್ವವನ್ನು ಪಡೆದಿವೆ. ಜೀವನವನ್ನು ಸಂಪೂರ್ಣಗೊಳಿಸಲು ವೃತ್ತಿಯು ಪ್ರಥಮ ಹೆಜ್ಜೆಯಾಗಿದೆ ಎಂದರು.
ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಇವರು ಮಾತನಾಡಿ ಇಂದಿನ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಭಾಗವಹಿಸುವಿಕೆ ಮುಖ್ಯವಾಗಿದೆ. ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡದೆ ಉದ್ಯೋಗದಾತರನ್ನಾಗಿ ಪರಿವರ್ತಿಸುವ ಸದುದ್ದೇಶವನ್ನು ಹಾಗೂ ವಿದ್ಯಾರ್ಥಿಗಳನ್ನು ಮುಂದಿನ ವೃತ್ತಿ ಜೀವನಕ್ಕೆ ಅಣಿಗೊಳಿಸುವ ಪ್ರಥಮ ಹೆಜ್ಜೆಯಾಗಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ತರಬೇತಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸಂವಹನ ಕಲೆ, ಜೀವನ ಕಲೆ, ಮೆದುಕೌಶಲ್ಯಗಳು, ಅಂ ಹಾಗೂ ಅS ಕೋರ್ಸ್‌ಗಳಿಗೆ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ. ಈ ದಿನದ ತರಬೇತಿ ವಿದ್ಯಾರ್ಥಿಗಳ ನಾಳಿನ ಉಜ್ವಲ ಭವಿಷ್ಯಕ್ಕೆ ತಳಹದಿಯಾಗಲಿ ಎಂದು ಶುಭ ಹಾರೈಸಿದರು.
ಬೆಂಗಳೂರಿನ WORKFORCE DEVELOPMENT CENTRE ಇದರ ತರಬೇತುದಾರರಾದ  ಗುರುರಾಜ್ ಎಂ.ಕೆ,  ಅಸ್ಗರ್ ಪಾಶಾ ಹಾಗೂ  ನಿತಿನ್ ಮಿರಾಜ್‌ಕರ್ ಇವರು ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ನೀಡಿದರು.
ದಿವಾಕರ ತೃತೀಯ ಇವರ ಪ್ರಾರ್ಥನೆಯೊಂದಿಗೆ ಕಾರ್ಯಾಗಾರ ಪ್ರಾರಂಭಗೊಂಡಿತು. ದೀಕ್ಷಿತ ತೃತೀಯ ಬಿಎ ಕಾರ್ಯಕ್ರಮವನ್ನು ನಿರೂಪಿಸಿದರು, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಸೌಮ್ಯ ಹೆಚ್.ಕೆ ಸಹಾಯಕ ಪ್ರಾಧ್ಯಾಪಕರು ಗಣ್ಯರನ್ನು ಸ್ವಾಗತಿಸಿದರೆ, ಉದ್ಯೋಗ ಭರವಸೆ ಕೋಶದ ಸಂಚಾಲಕರಾದ ಹನುಮಂತಯ್ಯ ಜಿ.ಹೆಚ್, ಸಹಾಯಕ ಪ್ರಾಧ್ಯಾಪಕರು ಸರ್ವರಿಗೂ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here