


ಅಡ್ಯನಡ್ಕ : ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್, ಶಿಟೋರಿಯೋ ಕರಾಟೆ-ಡು ನೇತೃತ್ವದಲ್ಲಿ ನಡೆದ ಮಂಗಳೂರಿನ ಓಪನ್ ಕರಾಟೆ ಚಾಂಪಿಯನ್ ಶಿಪ್ 2018-19 ಸ್ಪರ್ಧೆಯ 12 ವರ್ಷ ಪ್ರಾಯ ಬ್ಲೇಕ್ ಬೆಲ್ಟ್ ವಿಭಾಗದಲ್ಲಿ, ಅಭಿರಾಮ್ ಬಿ. ಇವರು ಸಿಂಗಲ್ ಕಟಾ ಹಾಗೂ ಗ್ರೂಪ್ ಕಟಾದಲ್ಲಿ 2 ಚಿನ್ನದ ಪದಕ ಮತ್ತು ಸಿಂಗಲ್ ಕುಮಿಟೆ(ಫೈಟ್)ಯಲ್ಲಿ 1 ಕಂಚಿನ ಪದಕ ಪಡೆದಿರುತ್ತಾರೆ.
ಇವರು ವಿಟ್ಲ ಬಸವನ ಗುಡಿಯ ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ, ಅಡ್ಯನಡ್ಕ ನೆಗಳಗುಳಿ ದರ್ಬೆಯ ಮಹೇಶ್ ಬಿ ಮತ್ತು ವಾಣಿ ದಂಪತಿಯ ಪುತ್ರ, ಕರಾಟೆ ಶಿಕ್ಷಕ ಮಾಧವ ಎಂ. ಅಳಿಕೆ ಇವರ ಶಿಷ್ಯ.


