Saturday, October 21, 2023

ಪಾದಪೂಜೆ ಕಾರ್ಯಕ್ರಮ

Must read

ಕಲ್ಲಡ್ಕ: 19 ರಂದು ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನ ಮಂದಿರಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮವು ನಡೆಯಿತು.

1ನೇ ತರಗತಿಯಲ್ಲಿರುವ ಸುಮಾರು 173 ಮಕ್ಕಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು
ಮಕ್ಕಳು ತಾಯಂದಿರ ಪಾದ ತೊಳೆದು ಅರಸಿನ ಕುಂಕುಮ ಹಚ್ಚಿ, ಪಾದಗಳಿಗೆ ಹೂವಿನ ಅರ್ಚನೆ ಮಾಡಿ ಪಾದಗಳಿಗೆ ನಮಸ್ಕಾರ ಮಾಡಿದರು, ಹಾಗೆಯೇ ತಾಯಂದಿರು ಮಕ್ಕಳಿಗೆ ಅಕ್ಷತೆ ಹಾಕಿ ಆಶಿರ್ವಾದಿಸುವುದರ ಮೂಲಕ ಸಿಹಿ ತಿನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕಇದರ ಸಂಚಾಲಕರಾದ ವಸಂತ ಮಾಧವ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್‌ ಉಪಸ್ಥಿತರಿದ್ದರು.

More articles

Latest article