Tuesday, October 17, 2023

ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಿಲಿಟರಿ ಪಾರಿತೋಷಕ ಮತ್ತು ಪದಕಗಳ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ

Must read

ಕಲ್ಲಡ್ಕ: ಶ್ರೀರಾಮ ಪದವಿ ಕಾಲೇಜಿನಲ್ಲಿ ಶ್ರೀರಾಮ ಉದ್ಯೋಗ ಮಾಹಿತಿ ಮತ್ತು ಮಿಲಿಟರಿ ಮಾರ್ಗದರ್ಶನ ಘಟಕ ಹಾಗೂ ಪ್ರಣವ ವಿದ್ಯಾರ್ಥಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಮಿಲಿಟರಿ ಪಾರಿತೋಷಕ ಮತ್ತು ಪದಕಗಳ ಪ್ರದರ್ಶಿನಿ ಹಾಗೂ ಸಂವಾದ ಕಾರ್ಯಕ್ರಮವನ್ನು ಭಾರತೀಯ ಭೂಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಎಮ್. ಎ. ರಾಜ್ ಮನ್ನಾರ್ ಉದ್ಘಾಟಿಸಿ, ಇಂದಿನ ಯುವಜನತೆ ಭಾರತೀಯ ಸೇನೆಯ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿದ್ದು ಇದಕ್ಕೆ ಕಾರಣ ಸರಿಯಾದ ಮಾಹಿತಿಯ ಕೊರತೆ. ಸೇನೆಯಲ್ಲಿರುವ ವಿಪುಲವಾದ ಅವಕಾಶಗಳು, ಸೌಲಭ್ಯಗಳು, ಸವಾಲುಗಳ ಬಗ್ಗೆ ವಿವರಿಸುತ್ತಾ ಸೇನೆಯಿಂದಾಗಿ ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಸೇನಾ ನಿವೃತ್ತ ಕ್ಯಾಪ್ಟನ್ ಡಾ| ಕೆ. ಜಿ. ಶೆಣೈ ಮಾತನಾಡಿ, ಭಾರತದ ಉತ್ತರ ಭಾಗ ವಿದೇಶಿ ದಾಳಿಗೆ ಎದುರಾಗಿ ಜನಸಾಮಾನ್ಯರು ಭೀಕರ ಆಘಾತಗಳಿಗೆ ತುತ್ತಾಗಿದ್ದರು. ಈ ಕಾರಣದಿಂದ ದೇಶಕ್ಕೆ ಬರಬಹುದಾದ ಆಪತ್ತು ಕಷ್ಟ ನೋವು ಇವುಗಳಿಗೆ ಸ್ಪಂದಿಸುವ ಸ್ವಭಾವ ಹೆಚ್ಚಾಗಿ ಈ ಭಾಗದ ಜನರಲ್ಲಿ ಕಂಡು ಬರುತ್ತಿದೆ. ಯುವಜನತೆ ವಿದೇಶಿ ವ್ಯಾಮೋಹಕ್ಕೆ ಒಳಗಾಗದೇ ಸೇನೆಗೆ ಸೇರುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ತಮ್ಮ 25 ವರ್ಷಗಳ ಸೇವಾ ಅವಧಿಯಲ್ಲಿ ಸಂಗ್ರಹಿಸಿದ ಸೇನಾ ಪದಕಗಳನ್ನು ಪ್ರದರ್ಶಿಸಿ, ಇದರ ಮುಖ್ಯ ಉದ್ದೇಶ ಯುವ ಜನರೊಂದಿಗೆ ಸೇರಿ ಭಾರತೀಯ ಸೇನೆಯ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಸೇನಯ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು. ಈ ಪ್ರದರ್ಶಿನಿಯನ್ನು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ವೇದಿಕೆಯಲ್ಲಿ ಭೂ ಸೇನಾ ಕ್ಯಾಪ್ಟನ್ ಪರ್ಲ್ ಫಿಯಾನ ಫೆರ್ನಾಂಡಿಸ್, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಶ್ರೀರಾಮ ಮಿಲಿಟರಿ ಮಾರ್ಗದರ್ಶನ ಫಟಕದ ನಿರ್ದೇಶಕ ಶ್ರೀ ಪ್ರಕಾಶ್ ಕುಕ್ಕಿಲ, ಸುಬ್ರಾಯ ಪೈ, ರಾಧಾಕೃಷ್ಣ ಪೈ, ಫ್ರಾಂಕ್ಲಿನ್ ಮೊಂತೇರೋ ಹಾಗೂ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ತ್ರಿವೇಣಿ ನಿರೂಪಿಸಿ, ಹರ್ಷಿತ್ ಸ್ವಾಗತಿಸಿ, ಶ್ರೇಯಶ್ರೀ ವಂದಿಸಿದರು.

More articles

Latest article