Monday, September 25, 2023
More

    ಜ.14 ರಿಂದ 16 ರ ವರೆಗೆ ‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಸಿ – ಜನರ ಜೀವ ಉಳಿಸಿ’ ಜಾಥಾ

    Must read

    ಬಂಟ್ವಾಳ: ದ.ಕ ‘ಬಂದರು ನಗರ’ ಎಂದು ಖ್ಯಾತಿವೆತ್ತಿದೆ. ಈ ಖ್ಯಾತಿಯನ್ನು ಅಳಿಸುವ ಕಾರ್ಯವನ್ನು ಹೆದ್ದಾರಿ ಇಲಾಖೆ ಮಾಡಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿಯನ್ನು ಕೇಂದ್ರ ಸರ್ಕಾರ ಅರ್ಧದಲ್ಲಿ ನಿಲ್ಲಿಸಿದೆ.
    ಆ ಮೂಲಕ ಜನರ ಜೀವ ಹಿಂಡುವ ಕೆಲಸ ಸರಕಾರ ಮಾಡುತ್ತಿದೆ, ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಒತ್ತಾಯಿಸಿ ಜಾಥವನ್ನು ಮಾಜಿ ಉಸ್ತವಾರಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.‌
    ಈ ಅವಸ್ಥೆಯ ಕಾಮಗಾರಿಯ ವಿರುದ್ಧ ಜನವರಿ 14 ರಿಂದ 16 ರ ವರೆಗೆ ‘ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಸಿ – ಜನರ ಜೀವ ಉಳಿಸಿ’ ಜಾಥಾವನ್ನು ನೆಲ್ಯಾಡಿಯಿಂದ ಬಿ.ಸಿ. ರೋಡ್ ವರೆಗೆ ಹಮ್ಮಿಕೊಳ್ಳಲಾಗಿದೆ.
    ಹೆದ್ದಾರಿ ಕಾಮಗಾರಿ ನಿಲ್ಲಿಸಿದ ಪ್ರಧಾನಮಂತ್ರಿ ಹಾಗೂ ಕಟೀಲ್ ರವರ ಅಭಿವೃದ್ಧಿ ಶೂನ್ಯ ಕಾರ್ಯ ಹಾಗೂ ಸುಳ್ಳಿನ ಬಗ್ಗೆ ಜನರಿಗೆ ತಿಳಿಸುವ ಈ ಜಾಥಾದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕಾಗಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.‌

    More articles

    LEAVE A REPLY

    Please enter your comment!
    Please enter your name here

    Latest article