ಬಂಟ್ವಾಳ: ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ, ಕರ್ನಾಟಕ ಇಸ್ಲಾಮಿಕ್ ಅಕಾಡಮಿ ಕುಂಬ್ರ ಇದರ ನಿರ್ದೇಶಕ ಶೈಖುನಾ ಅಲ್ಹಾಜ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಉಸ್ತಾದ್ ಅದರ ನಿಧನ ವಾರ್ತೆಯು ನಿಜಕ್ಕೂ ಮನಸ್ಸಿಗೆ ಬಹಳ ಅಘಾತವನ್ನುಂಟು ಮಾಡಿದೆ. ಇಡೀ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಜಿಲ್ಲೆಯ ಸರ್ವ ಜನಾಂಗಕ್ಕೂ ಶೈಖುನಾ ಉಸ್ತಾದರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪುದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರ್ವಶಕ್ತನಾದ ಅಲ್ಲಾಹನು ಶೈಖುನಾ ಮಿತ್ತಬೈಲ್ ಉಸ್ತಾದರ ಖಬ್ ರ್ ವಿಶಾಲಗೊಳಿಸಲಿ. ಅವರ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೂ ಸಮುದಾಯಕ್ಕೂ ಅಲ್ಲಾಹು ನೀಡಲಿ ಎಂದು ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.