Sunday, October 22, 2023

ಅಭಿವೃದ್ಧಿ ಗೆ ಹೆಚ್ಚಿನ ಒತ್ತು: ಐವನ್ ಡಿ.ಸೋಜ

Must read

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಂಗಿಪೇಟೆ ಹಳೆ ರಸ್ತೆಯಿಂದ ಮೊಂತೆ ಮರಿಯಾನೋ ಚರ್ಚ್ ವರೆಗೆ ಮುಖ್ಯಮಂತ್ರಿ  ಸಂಸದೀಯ ಕಾರ್ಯದರ್ಶಿ ಐವನ್ ಡಿ.ಸೋಜ ಅವರ  ಪ್ರದೇಶಿಕ ಅಭಿವೃದ್ಧಿ ನಿಗಮದ  15 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲನ್ಯಾಸ ನಡೆಯಿತು.
 ಕಾಂಕ್ರೀಟಿಕರಣ ರಸ್ತೆಯ ಶಿಲಾನ್ಯಾಸವನ್ನು ಐವನ್ ಡಿ.ಸೋಜ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಸರಕಾರದ ಅನುದಾನಗಳನ್ನು ಅವಶ್ಯಕತೆ ಗಳುಗುಣವಾಗಿ ಬಳಕೆ ಮಾಡುವುದು ನನ್ನ ಉದ್ದೇಶ.
ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದ ಸಮಸ್ಯೆ ಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಅವರು ಹೇಳಿ ದರು.
ಮಾಜಿ.ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ಉಪಾಧ್ಯಕ್ಷ ಲಿಡಿಯಾ ಪಿಂಟೋ, ಮಲ್ಲಿ ವಲಯ ಅಧ್ಯಕ್ಷ ರಪೀಕ್ ಪೆರಿಮಾರ್,
ಸದಸ್ಯ ರಾದ ಪೈಜಲ್ ಅಮ್ಮೆಮಾರ್ , ಹಾಶೀರ್ ಪೆರಿಮಾರ್ , ಝಾಹೀರ್ ಕುಂಪಣಮಜಲು , ಇಕ್ಬಾಲ್ ಸುಜೀರ್  ಮಹಮ್ಮದ್ ಮೋನು ಪರಂಗಿಪೇಟೆ, ಲವಿನಾ ಕುಂಪಣಮಜಲು, ಮಸೀದಿ ಅದ್ಯಕ್ಷ ಮಹಮ್ನದ್ ಬಾವ, ಮಾಜಿ ಸದಸ್ಯ ಬಶೀರ್ ತಂಡೇಲ್, ಮಸೀದಿ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರು, ಕೋಶಾಧಿಕಾರಿ ಮಜೀದ್ ಪರಂಗಿಪೇಟೆ, ಪ್ರಮುಖ ರಾದ ಎಂ.ಕೆ.ಮಹಮ್ಮದ್, ಅಬುಬಕ್ಕರ್ ಉಡುಪಿ, ಗಪೂರ್ ಮುಂಬಾಯಿ, ಕರೀಂ ಮಾರಿಪಳ್ಳ , ಅಬುಬಕರ್ ಪರಂಗಿಪೇಟೆ, ಯಶವಂತ,  ಸಲಾಂ , ಪಿಲೋಮಿನಾ ಟೀಚರ್,ಲತೀಪ್ ಮಲಾರ್,  ಬಶೀರ್ ಪದಂಜಾರ್,
ಮೊಂತೆ ಮರಿಯಾನೋ ಚರ್ಚ್ ನ ಧರ್ಮ ಗುರು ಫಾ.ಜೆರಾಲ್ಡ್ ಲೋಬೊ, ಹಾಗೂ ಚರ್ಚ್ ಬ್ರದರ್ಸ್ ಮತ್ತಿತರ ರು ಉಪಸ್ಥಿತರಿದ್ದರು.

More articles

Latest article