Wednesday, October 18, 2023

70ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಬಿ.ಸಿ ರೋಡ್ ಮಿನಿವಿಧಾನಸೌಧದ ಮುಂಭಾಗದಲ್ಲಿ

Must read

ಬಂಟ್ವಾಳ: 70ನೇ ಗಣರಾಜ್ಯೋತ್ಸವದ ಕಾರ್ಯಕ್ರಮ ಬಿ.ಸಿ ರೋಡ್ ಮಿನಿವಿಧಾನಸೌಧದ ಮುಂಭಾಗದಲ್ಲಿ ಸಂಪನ್ನಗೊಂಡಿತು.
ಸರಕಾರಿ ಕಚೇರಿಗೆ ನಾನಾ ಸಮಸ್ಯೆ ಹೊತ್ತು ಬರುವ ಜನರ ಮುಖದಲ್ಲಿ ಮಂದಹಾಸ ಮೂಡಿಸುವುದೇ ನಿಜವಾದ ದೇಶ ಸೇವೆ ಎಂದು ತಾಲೂಕು ತಹಶೀಲ್ದಾರ್, ಕಾರ್ಯನಿರ್ವಹಕ ದಂಡಾಧಿಕಾರಿ ರಶ್ಮಿ ಎಸ್.ಆರ್. ಅವರು ಹೇಳಿದರು.
ಬಂಟ್ವಾಳ ಮಿನಿ ವಿಧಾನ ಸೌಧದಲ್ಲಿ ನಡೆದ ತಾಲೂಕು ಗಣ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ದೇಶದ ಪ್ರತಿಯೊಬ್ಬ ನಾಗರಿಕರು ಕೂಡ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸಭಾಧ್ಯಕ್ಷತೆ ವಹಿಸಿ ಗಣ ರಾಜ್ಯೋತ್ಸವದ ಸಂದೇಶ ನೀಡಿದರು.

ಪ್ರಧಾನ ಭಾಷಣ:
ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಭಾಷಣ ಮಾಡಿದ ಬೋಳಂತಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವಿಠಲ ನಾಯಕ್ ಅವರು
ನಮಗಿಂದು ಬೇಕಾಗಿರುವುದು ಸಾಮರಸ್ಯದ ಭಾರತ. ಈ ನಿಟ್ಟಿನಲ್ಲಿ ಮಕ್ಕಳನ್ನು ನಾವು ಸಿದ್ಧ ಪಡಿಸಬೇಕೆಂದರು. ಭಾಷಣದುದ್ದಕ್ಕೂ ಹಾಸ್ಯ ಚಟಾಕಿಯಿಂದ ಸ್ವಾರಸ್ಯಕರವಾಗಿ ಮಾತನಾಡಿದ ಅವರು, ದೇಶ ಭಕ್ತಿ ಗೀತೆ ಹಾಡುತ್ತಾ ರಂಜಿಸಿದರು.
ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ. ಇ.ಓ. ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಶಿಶು ಯೋಜನಾಧಿಕಾರಿ ಸುಧಾ ಜೋಷಿ, ಪಿಡಬ್ಲ್ಯೂಡಿ ಸಹಾಯ ಕ ಕಾರ್ಯನಿರ್ವಹಕ ಇಂಜಿನಿಯರ್ ಉಮೇಶ್ ಭಟ್ ಸ್ವಾತಂತ್ರ ಹೋರಾಟ ಗಾರ ಶ್ಯಾಮ ರಾವ್ ಆಚಾರ್ಯ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ,ರವಿಶಂಕರ್, ಪ್ರಭಾರ ಉಪತಹಶೀಲ್ದಾರ್ ಸೀತಾರಾಮ ಗ್ರೆಟ್ಟಾ ಮಸ್ಕರೇಞಸ್, ಸೀತಾರಾಮ . ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ನವೀನ್ ಬೆಂಜನ ಪದವು, ದಿವಾಕರ ಮುಗುಳಿಯ ಹಾಜರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವ ಪ್ರಕಾಶ್ ಮಂಜು ವಿಟ್ಲ ನಿರೂಪಿಸಿದರು.

More articles

Latest article