ಬಂಟ್ವಾಳ: ಸರಕಾರಿ ಫೌಢ ಶಾಲೆ ಸುಜೀರು ಇಲ್ಲಿ 70ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಉಮರ್ ಫಾರೂಕ್ ಧ್ವಜಾರೋಹಣವನ್ನು ನೆರವೇರಿಸಿದರು.



ಪುದು ಗ್ರಾಂ.ಪಂ. ಅಧ್ಯಕ್ಷರಾದ ರಮ್ಲಾನ್ ಮಾರಿಪಲ್ಲ ಸಭಾಧ್ಯಕ್ಷತೆ ವಹಿಸಿದರು. ಕಳೆದ ವರ್ಷದ ಎಸ್ ಎಸ್ ಎಲ್ ಸಿ ಸಾಧಕರನ್ನು ಗೌರವಿಸಲಾಯಿತು. ಶಾಲಾ ಪಂದ್ಯಾಟಗಳಲ್ಲಿ ಗೆದ್ದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಶಾಲಾ ಸಮಿತಿಯ ಸದಸ್ಯರಾದ ಕಿಶೋರ್, ಝಬೇರ್,ಇಂದಿರಾ, ದೇವಕಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಮಂಗಳ ವೈ ಸ್ವಾಗತಿಸಿದರು, ಶಿಕ್ಷಕ ಜಯಪ್ರಕಾಶ್ ವಂದಿಸಿದರು, ಸಮಾಜ ವಿಜ್ಞಾನ ಶಿಕ್ಷಕ ಮೊಹಮ್ಮದ್ ಬಿ. ಕಾರ್ಯಕ್ರಮ ನಿರ್ವಹಿಸಿದರು.