ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಯೋಜನೆಯಡಿ ಅನುಷ್ಠಾನಗೊಂಡಿರುವ ಹೈಮಾಸ್ಟ್ ದೀಪವನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಜಯಶ್ರೀ ಕೋಡಂದೂರು ಇವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ, ಪಂಚಾಯಿತಿ ಉಪಾಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ , ಪಿಡಿಒ ಗೋಕುಲ್ದಾಸ್ ಭಕ್ತ, ಪಂಚಾಯಿತಿ ಸದಸ್ಯರಾದ ಸತೀಶ್ ಕೆಂದರ್ೆಲು, ಹಿಮಾಕರ ಗಾಣಿಗ, ಬೇಬಿ, ಜಗದೀಶ್ವರಿ, ಆಶಾ, ಜಯರಾಮ ಕಾರ್ಯಾಡಿಗುತ್ತು, ಸ್ಥಳೀಯರಾದ ನವೀನ್, ಲತೀಫ್ ಕೋಲ್ಪೆ, ಅಬ್ದುಲ್ ಖಾದರ್, ಉಷಾ, ಕೃಷ್ಣಪ್ಪ ಗೌಡ , ಮೋನಪ್ಪ ಗೌಡ ಉಪಸ್ಥಿತರಿದ್ದರು.
