ಮಂಗಳೂರು: ಟ್ರಂಡ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಜನವರಿ 10 ರಿಂದ ಮಾರ್ಚ್ 25ರ ತನಕ ಎಸ್ ಎಸ್ ಎಲ್ ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದಾತಾ ತರಬೇತಿ ನಡೆಸಲಿದೆ. ಇದರ ಉದ್ಘಾಟನೆಯು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಎಸ್.ಕೆ.ಎಸ್.ಎಸ್.ಎಫ್ ಕೇಂದ್ರ ಸಮೀತಿ ಕಾರ್ಯದರ್ಶಿ ಸದಕತುಲ್ಲ ಫೈಝಿ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.

ಸಭೆ ಅಧ್ಯಕ್ಷತೆಯನ್ನು ವಹಿಸಿದ ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಮಾತನಾಡಿ ಟ್ರೆಂಡ್ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಳನ್ನು ಸಲ್ಲಿಸುತ್ತಿದ್ದು ಇಂದು ರಾಜ್ಯ ಮಟ್ಟದ ಅಭಿಯಾನ ನಡೆಸುತ್ತಿರುವುದು. ಅಭಿನಂದನಾರ್ಹ ಎಂದು ತಿಳಿಸಿದರು. ಅಭಿಯಾನದ ಮಾಹಿತಿಯನ್ನು ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ನೀಡುತ್ತಾ ಎಲ್ಲಾ ಶಾಲೆಗಳಲ್ಲೂ ನೂರು ಶೇಖಡಾ ಪಲಿತಾಂಶ ಸಿಗಬೇಕು ಎನ್ನುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ತರಭೇತಿ ನೀಡಲು ಮುಂದಾಗಿವೆ. ಈಗಾಗಲೇ ರಾಜ್ಯದ ಐವತ್ತಕ್ಕೂ ಹೆಚ್ಚೂ ಶಿಕ್ಷಣ ಸಂಸ್ಥೆಗಳೂ ತರಭೇತಿ ನೀಡುವಂತೆ ವಿನಂತಿಸಿಕೊಂಡಿವೆ. ತರಬೇತಿಯ ಸಂಪೂರ್ಣ ವೆಚ್ಚವನ್ನು ಟ್ರೆಂಡ್ ಸಮೀತಿ ವಹಿಸೀಕೊಳ್ಳಿದೆ ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ವಿಷಯ ಮಂಡಿಸಿದರು. ಬಿತ್ತಿ ಪತ್ರವನ್ನು ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಸಭೆಯಲ್ಲಿ ಟ್ರೇಂಡ್ ಜನರಲ್ ಕನ್ವೀನರ್ ಇಕ್ಬಾಲ್ ಬಾಳಿಲ, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ, ಹನೀಫ್ ಧೂಮಲಿಕೆ, ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ, ಮುಹಮ್ಮದ್ ಕುಂಞ ಮಾಸ್ಟರ್, ಆರೀಫ್ ಬಡಕಬೈಲ್, ಫಾರೂಖ್ ಮೂಡಬಿದ್ರೆ,ಸಿದ್ದೀಖ್ ಆಡ್ಕ, ಇಬ್ರಾಹಿಮ್ ಮುಸ್ಲಿಯಾರ್ ವಿಟ್ಲ, ಶಾಫಿ ದಾರಿಮಿ ಸುಳ್ಯ, ಇಸ್ಹಾಕ್ ಫೈಝಿ, ಅಶ್ರಫ್ ಕಡಬ, ರಿಯಾಝ್ ರಹ್ಮಾನಿ ಮಂಗಳೂರು, ಇರ್ಷಾದ್ ದಾರಿಮಿ ಬಂಟ್ವಾಳ, ನೇಝೀರ್ ಅಝ್ಝರಿ ಬೆಳ್ತಂಗಡಿ, ಝಕರಿಯ್ಯ ಮರ್ಧಾಳ, ಇಬ್ರಾಹಿಮ್ ಕೊಣಾಜೆ, ಶರೀಫ್ ಸಾಲ್ಮರ, ನೌಶಾದ್ ಮಲಾರ್ ಮುಹಮ್ಮದ್ ಮುಸ್ಲಿಯಾರ್ ಪುತ್ತೂರು, ಶರೀಫ್ ಮೂಸ ಕುದ್ದುಪದವು, ಮುಂತಾದವರು ಭಾಗವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here