ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕಿನ ಆಶ್ರಯದಲ್ಲಿ ಪ್ರಗತಿ ಬಂಧು/ ಸ್ವ ಸಹಾಯ ಸಂಘದ 53 ಮಂದಿ ಸದಸ್ಯರಿಗೆ 3 ದಿನಗಳ ರಾಜ್ಯ ಮಟ್ಟದ ಅಧ್ಯಯನ ಪ್ರವಾಸವನ್ನು ಹಾಸನ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಚೆನ್ನರಾಯಪಟ್ಟಣ ತಾಲೂಕಿಗೆ ಆಯೋಜಿಸಿದ್ದು

ಈ ಸಂದರ್ಭ ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ತೋಟಗಾರಿಕಾ ಬೆಳೆಗಳ ನಿಖರ ಬೇಸಾಯ ಉತ್ಕೃಷ್ಠ ಕೇಂದ್ರ, ಪ್ರಗತಿಪರ ಕೃಷಿಕರ ಭೇಟಿ, ಸಮಗ್ರ ಕೃಷಿ, ಮಾದರಿ ಹೈನುಗಾರಿಕೆ, ಸಾವಯವ ಕೃಷಿ, ನೀರಾವರಿ ವಿಧಾನ, ಸ್ವ-ಉದ್ಯೊಗ, ಹಸಿರು ಇಂಧನ ಕಾರ್ಯಕ್ರಮಗಳ ಘಟಕಗಳಿಗೆ ಭೇಟಿ ನೀಡಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಲಾಯಿತ್ತು. ಈ ಅಧ್ಯಯನ ಪ್ರವಾಸದ ಉಸ್ತುವಾರಿಯನ್ನು ಶ್ರೀ.ಕ್ಷೇ.ಧ.ಗ್ರಾ.ಯೋ.(ರಿ) ಬಂಟ್ವಾಳ ತಾಲೂಕಿನ ಕೃಷಿ ಮೇಲ್ವಿಚಾರಕ ಮುರಳೀಧರ ಎ, ಬಂಟ್ವಾಳ ಮೇಲ್ವಿಚಾರಕ ಶಶಿಧರ್ ವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here