ಬಂಟ್ವಾಳ : ಪ್ರವಾದಿ ನಿಂದನೆ ಆರೋಪದಡಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದರ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮುಸ್ಲಿಂ ಒಕ್ಕೂಟ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಯಿತು.

ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿ, ಪ್ರವಾದಿ ಮನುಕುಲದ ಆಸ್ತಿ. ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ಅವರ ಮಾತಿನಿಂದ ಮುಸ್ಲಿಮ್ ಸಮಾಜಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ನೋವಾಗಿದೆ ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷ ಕೆ.ಎಚ್. ಅಬೂಬಕರ್ ಅವರು ಮಾತನಾಡಿ, ಅಜಿತ್ ವಿರುದ್ಧ ಪ್ರೆಸ್‌ಕೌನ್ಸಿಲ್ ಕ್ರಮ ಜರಗಿಸಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜ ಬಂಟ್ವಾಳ ಇದರ ಅಧ್ಯಕ್ಷ ಇಬುನ್ ಅಬ್ಬಾಸ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪ್ರಮುಖರಾದ ಹಾರೂನ್ ರಶೀದ್, ಕೆ.ಎಸ್. ಅಮೀರ್ ತುಂಬೆ, ಪಿ.ಎ. ರಹೀಂ ಬಿ.ಸಿ.ರೋಡ್, ಇಸಾಕ್ ಮಿತ್ತೂರು, ಅಶ್ರಫ್ ಫೈಝಿ, ಇಸ್ರಾರ್ ಗೂಡಿನಬಳಿ ಮತ್ತಿತರರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೈಲಾರ್ ವಂದಿಸಿದರು. ಬಳಿಕ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ, ಬಂಟ್ವಾಳ ನಗರ ಠಾಣೆಯಲ್ಲಿ ದೂರು ಸಲ್ಲಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here