Thursday, October 26, 2023

ಪ್ರಧಾನಿ ಜೊತೆ ಪ್ರಜಾಪ್ರಭುತ್ವ ಪರೇಡ್ ವೀಕ್ಷಣೆ ಡಾ| ಹರ್ಷಿತಾ ಕೆ. ಪೂಂಜ ಆಯ್ಕೆ

Must read

ಬಂಟ್ವಾಳ : ಪ್ರಧಾನಿ ಜೊತೆ ದೆಹಲಿ ರಾಜಪಥದಲ್ಲಿ ಜ. 26 ರಂದು ನಡೆಯುವ ಪ್ರಜಾಪ್ರಭುತ್ವ ಪರೇಡ್ ವೀಕ್ಷಣೆಯ ಪ್ರತಿಭಾನ್ವಿತ ವಿದ್ಯಾರ್ಥಿ ಗೌರವಕ್ಕೆ ಬಂಟ್ವಾಳ ತಾಲೂಕು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೃಷ್ಣಕುಮಾರ್ ಪೂಂಜ ಅವರ ಪುತ್ರಿ ಡಾ| ಹರ್ಷಿತಾ ಕೆ. ಪೂಂಜ ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ ವಿವಿಧ ಯುನಿವರ್ಸಿಟಿಗಳ ನೂರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ಸಾಲಿನಲ್ಲಿ ಕುಳಿತು ಪ್ರಜಾಪ್ರಭುತ್ವ ಪರೇಡ್ ವೀಕ್ಷಿಸುವ ಗೌರವವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯು ಕಲ್ಪಿಸುತ್ತದೆ.
ಡಾ| ಹರ್ಷಿತಾ ಕೆ. ಪೂಂಜ ಜ| ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಸ್ನಾತಕೋತ್ತರ ವಿದ್ಯಾರ್ಥಿನಿ, ನಿಟ್ಟೆ ವಿವಿ ಎಂಬಿಬಿಎಸ್ ಸ್ವರ್ಣ ಪದಕ ಪುರಸ್ಕೃತೆಯಾಗಿದ್ದಾರೆ. ಅವರು ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಗೌರವಕ್ಕೆ ಪಾತ್ರರಾಗಿದ್ದರು.

More articles

Latest article