


ಬಂಟ್ವಾಳ: ಡಿ.29 ರಂದು ಅರಣ್ಯ ರಕ್ಷಕರ ಮತ್ತು ವೀಕ್ಷಕರ ಸಂಘ(ರಿ.) ಮಂಗಳೂರು ಇದರ 2019ನೇ ಸಾಲಿನ ಡೈರಿ ಬಿಡುಗಡೆ, ಸನ್ಮಾನ ಸಮಾರಂಭ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ.ಕರಿಕಾಲಿನ್ (IFS) ಕಾರ್ಯಕ್ರಮ ಉದ್ಘಾಟಿಸಿದರು. ಕೆ.ಎನ್ ಜಗದೀಶ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಮುಖ್ಯ ಅಧಿಕಾರಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ, ವಲಯ ಅರಣ್ಯಾಧಿಕಾರಿ ಸುರೇಶ್, ಮಂಗಳೂರು ವಿಭಾಗದ ಉಪ ವಲಯ ಅಧಿಕಾರಿಗಳ ಸಂಘದ ಅಧ್ಯಕ್ಷ ಸಂಜೀವ.ಕೆ.,ಕುಂದಾಪುರ ವಿಭಾಗದ ಅರಣ್ಯ ರಕ್ಷಕ ಹಾಗೂ ವೀಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಜಿ.ನಾಯಕ್, ಕೇಂದ್ರ ಸಂಘ (ರಿ) ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರಾಜು ಲಿಂಬು ಚೌವ್ಹಾಣ, ರಾಜ್ಯ ಪರಿಷತ್ ಸದಸ್ಯ ಕೆ.ಕೃಷ್ಣಪ್ಪ ವೇದಿಕೆಯಲ್ಲಿದ್ದರು.
ಈ ಸಂಧರ್ಭದಲ್ಲಿ 2019ನೇ ಸಾಲಿನ ಡೈರಿಯನ್ನು ಬಿಡುಗಡೆ ಮಾಡಲಾಯಿತು. ಪುತ್ತೂರು ವಲಯದ ಅರಣ್ಯ ಆನಂದ್ ರವರು ರಚಿಸಿದ “ಮನದ ಮಂದಾರ” ಕವನ ಸಂಕಲನವನ್ನು ಡಾ| ಕರಿಕಾಲಿನ್ ವಿ.ಬಿಡುಗಡೆಗೊಳಿಸಿದರು. ಉರಗ ತಜ್ಞ ಜಕಾಲಿಯ ಹಾಗೂ ಅಶೋಕ್ ರವರನ್ನು ಸನ್ಮಾನಿಸಲಾಯಿತು. ಸ್ವಯಂ ನಿವೃತ್ತಿ ಹೊಂದಿದ ಅರಣ್ಯ ರಕ್ಷಕ ಹನುಮಂತರಾಜ್ ಅರಸ್, ಶಂಭೂರು ನರ್ಸರಿಯ ಪ್ಯಾಸ್ಕರ್ ಹಾಗೂ ಸಂಘದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಜಿತೇಶ್ ಪುತ್ರನ್ ರವರನ್ನು ಸನ್ಮಾನಿಸಲಾಯಿತು. ಚಿದಾನಂದ ಸ್ವಾಗತಿಸಿದರು. ಆನಂದ ಹಾಗೂ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.


