Tuesday, October 31, 2023

ಶ್ರವಣ್ ಅಗ್ರಬೈಲು ಅವರಿಗೆ ಅಂತರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಚಿನ್ನದ ಪದಕ

Must read

ಬಂಟ್ವಾಳ: ಶ್ರವಣ್ ಬಿ.ಎಂ.ಅಗ್ರಬೈಲು ಇವರಿಗೆ ಕೊಲ್ಕತ್ತಾದಲ್ಲಿ ನಡೆದ ಪೋಟೋಗ್ರಾಫಿ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ವಿಭಾಗದ ಎಫ್ .ಐ. ಎ.ಪಿ ಚಿನ್ನದ ಪದಕ ಲಭಿಸಿದೆ.

ಒನ್ ಸೀನ್ ಟುವೆಲ್ ಇಯರ್ಸ್ ಎಂಬ ಶೀರ್ಷಿಕೆ ಯಡಿಯಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಚಿತ್ರಕ್ಕೆ ಟ್ರಾವೆಲ್ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಮೋಹನ್ ಪೂಜಾರಿ ಮತ್ತು ಕಸ್ತೂರಿ ಮೋಹನ್ ಅಗ್ರಬೈಲು ಅವರ 24 ವರ್ಷ ಪ್ರಾಯದ ಪುತ್ರ ಸಿವಿಲ್ ಇಂಜಿನಿಯರಿಂಗ್ ಪದವಿದರರಾದ ಶ್ರವಣ್ ಅಗ್ರಬೈಲು ಅವರು ವಿವಿಧ ವಿಭಾಗದಲ್ಲಿ ಒಟ್ಟು 29 ಪದಕಗಳನ್ನು ಗಳಿಸಿದ್ದು ಅದರಲ್ಲಿ 8 ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆದುಕೊಂಡಿರುತ್ತಾರೆ.

More articles

Latest article