Sunday, October 22, 2023

ಬುರೂಜ್ : 70ನೇ ಗಣರಾಜ್ಯೋತ್ಸವ ಆಚರಣೆ

Must read

ಪುಂಜಾಲಕಟ್ಟೆ/ ಬಂಟ್ವಾಳ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ 70ನೇ ಗಣರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ವಾಲ್ಟರ್ ಪಿಂಟೋ ಮಾಜಿ ಕಾರ್ಯದರ್ಶಿಗಳು ಲಯನ್ಸ್ ಕ್ಲಬ್ ಪುಂಜಾಲಕಟ್ಟೆ ಇವರು ನೆರವೇರಿಸಿದರು. ವಿದ್ಯಾರ್ಥಿಗಳಿಂದ ಮೆರವಣಿಗೆ, ಸಾಮೂಹಿಕ ಕವಾಯತು, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದ ನಂತರ ಚಿಂತನ ಪ್ರಕಾಶನ, ಪುಟಾಣಿ ವಿಜ್ಞಾನ, ತಾರಮಂಡಲ, ನವೋದಯ, ಇತ್ಯಾದಿ ಸಂಸ್ಥೆಗಳು ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪದಕಗಳು ಮತ್ತು ಸರ್ಟಿಫಿಕೇಟ್‌ಗಳನ್ನು ಪ್ರಧಾನ ಮಾಡಲಾಯಿತು. ಶಾಲಾ ಸಂಚಾಲಕರಾದ ಶೇಕ್ ರಹ್ಮತ್ತುಲ್ಲಾಹ್ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು. ಶಿಕ್ಷಕಿ ಮಹಾಲಕ್ಷ್ಮಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ  ಜಯಶ್ರೀ ಬಿ., ಜನಾಬ್ ಶಬ್ಬೀರ್ ಅಹ್ಮದ್, ಜನಾಬ್ ಶೇಕ್ ಅಬ್ದುಲ್ಲಾ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ನಿಮ್ರಾ ಬಾನು 9ನೇ ತರಗತಿ, ಸಾಕ್ಷಾ ಮತ್ತು ವಂದನಾರ್ಪಣೆ ಸಾರಿಕಾ ಇವರಿಂದ ನೆರವೇರಿತು.

More articles

Latest article