Thursday, September 28, 2023

ಬುರೂಜ್ : ಕರಾಟೆಯಲ್ಲಿ ಸಾಧನೆ

Must read

ಬಂಟ್ವಾಳ : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇದರ ವಿದ್ಯಾರ್ಥಿಗಳು ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ 3 ಪ್ರಥಮ, 1 ದ್ವಿತೀಯ ಮತ್ತು 6 ತೃತೀಯ ಸ್ಥಾನವನ್ನು ಕುಮಿಟೆ ವಿಭಾಗದಲ್ಲೂ, 3 ಪ್ರಥಮ 4 ದ್ವಿತೀಯ 11 ತೃತೀಯ ಸ್ಥಾನವನ್ನು ಕಟಾ ವಿಭಾಗದಲ್ಲೂ ಗಳಿಸಿ ಒಟ್ಟು 6 ಪ್ರಥಮ 5 ದ್ವಿತೀಯ 17 ತೃತೀಯ ಸ್ಥಾನಗಳನ್ನು ಗಳಿಸಿ ಸಂಘಟಕರಿಂದ ಬೆಸ್ಟ್ ಸಪೋರ್ಟಿಂಗ್ ಟೀಮ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಯಿಷಾ ಮಲೀಹಾ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಪ್ರಥಮ, ಮೊಹಮ್ಮದ್ ಇಫಾಝ್ ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟಾ ವಿಭಾಗದಲ್ಲಿ ದ್ವಿತೀಯ, ಮಶ್ಕೂರ ಹನಾ ಕಟಾ ವಿಭಾಗದಲ್ಲಿ ಪ್ರಥಮ, ಕುಮಿಟೆ ವಿಭಾಗದಲ್ಲಿ ತೃತೀಯ, ಶೇಕ್ ಮೊಹಮ್ಮದ್ ದಾನೀಶ್ ಕಟಾ ವಿಭಾಗದಲ್ಲಿ ಪ್ರಥಮ, ಮುಬೀನತುಲ್ ಅಸ್ಮಿಯಾ ಕುಮಿಟೆ ವಿಭಾಗದಲ್ಲಿ ಪ್ರಥಮ, ಅನ್ಹ ಆಯಿಷಾ ಕಟಾ ವಿಭಾಗದಲ್ಲಿ ದ್ವಿತೀಯ, ಕುಮಿಟೆ ವಿಭಾಗದಲ್ಲಿ ತೃತೀಯ, ಖದ್ಸಿಯಾ ರಿಝಾ ಶೇಕ್ ಕಟಾ ವಿಭಾಗದಲ್ಲಿ ದ್ವಿತೀಯ, ಕುಮಿಟೆ ವಿಭಾಗದಲ್ಲಿ ತೃತೀಯ, ಮೊಹಮ್ಮದ್ ಇರ್ಫಾನ್ ಕಟಾ ವಿಭಾಗದಲ್ಲಿ ದ್ವಿತೀಯ, ಅಂಬ್ರೀನ್ ಬಾನು ಕುಮಿಟೆ ವಿಭಾಗದಲ್ಲಿ ದ್ವಿತೀಯ, ಮೊಹಮ್ಮದ್ ಮಸವೀರ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ, ಮೊಹಮ್ಮದ್ ಶರೀಕ್ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ತೃತೀಯ, ಐಝ ಫಾತಿಮ, ಕುಮಿಟೆ ವಿಭಾಗದಲ್ಲಿ ತೃತೀಯ, ಸ್ಫೂರ್ತಿ, ಬಾಸಿತ್ ಅಹ್ಮದ್, ಧನುಶ್ ಹೆಗ್ಡೆ, ಯತೀಂದ್ರ ಎ., ಚಿಂತನ್, ಮೊಹಮ್ಮದ್ ಸಿಫಾಝ್, ಮನ್ವಿತ್, ರಿದಾನ್ ರೆಹ್ಮಾನ್ ಘಾಝಿ, ಸಾನಿಯಾ ನೂರ್ ಅಫ್ಸಾನ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಜನಾಬ್ ನದೀಮ್, ಜನಾಬ್ ಮೊಹಮ್ಮದ್ ಸರ್ಫ್‌ರಾಝ್ ಮತ್ತು ಜನಾಬ್ ಮೊಹಮ್ಮದ್ ಹಾರೀಸ್ ತರಬೇತಿ ನೀಡುತ್ತಿದ್ದಾರೆ. ಭಾಗವಹಿಸಿದ ಕರಾಟೆ ಪಟುಗಳನ್ನು ಶಾಲಾ ಸಂಚಾಲಕರಾದ ಜನಾಬ್ ಶೇಕ್ ರಹ್ಮತ್ತುಲ್ಲಾ ಮುಖ್ಯ ಶಿಕ್ಷಕರು  ಜಯಶ್ರೀ.ಬಿ. ಮತ್ತು ಶಿಕ್ಷಕ ವೃಂದ ಅಭಿನಂದಿಸಿದೆ.

More articles

Latest article